

j3tvkannada
ಬಾಗಲಕೋಟೆ:ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ಮುತ್ತು ಮುಳ್ಳಾ ಬಂಧಿತ ಶಿಕ್ಷಕ. ಶಿಕ್ಷಣ ಇಲಾಖೆಯಲ್ಲಿ CRP ಆಗಿ ಕೆಲಸ ಮಾಡುತ್ತಿದ್ದ ಈ ಶಿಕ್ಷಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ಆರೋಪ ಕೇಳಿ ಬಂದಿದೆ.
ಕಾಮುಕರಿಗೆ ಕಣ್ಣಿಲ್ಲ, ಅವರಿಗೆ ಅಪ್ರಾಪ್ತರು ಯಾರು ಪ್ರಾಪ್ತರು ಯಾರು? ಎಂಬ ವ್ಯತ್ಯಾಸವೇ ತಿಳಿಯದ ರಾಕ್ಷಸರಾಗಿರುತ್ತಾರೆ. ಇಂತಹ ಶಿಕ್ಷಕರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಪ್ರಕರಣ ಸಂಬಂಧ ಶಿಕ್ಷಕ ಮುತ್ತು ಮುಳ್ಳಾ ವಿರುದ್ಧ ಅಪ್ರಾಪ್ತೆ ಮೇಲೆ ಶಿಕ್ಷಕ ಲೈಂಗಿಕ ದೌರ್ಜನ್ಯ ಆರೋಪದಡಿ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.