
ಹುಬ್ಬಳ್ಳಿ/ಧಾರವಾಡ:ಮಾರುಕಟ್ಟೆಯಲ್ಲಿ ಟಪಾನ್ಗುಚ್ಚಿ ಡಾನ್ಸ್ ಮಾಡ್ತಾ ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಯುವಕನೊಬ್ಬನಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಬಳಿಕ ಎಚ್ಚೆತ್ತ ಯುವಕನಿಗೆ ತಪ್ಪಿನ ಅರಿವಾಗಿದ್ದು, ಕ್ಷಮೆ ಕೇಳಿದ್ದಾನೆ.

j3tvkannada
ಹುಬ್ಬಳ್ಳಿ ದುರ್ಗದ ಬೈಲು ಮೂಲದ ನವೀನ್ ಉಪ್ಪಾರ್, ಇನ್ಮುಂದೆ ರೀಲ್ಸ್ ಮಾಡಲ್ಲ ಅಂತ ಹೇಳಿದ್ದಾನೆ. ನಾನು ಸಾರ್ವಜನಿಕ ಸ್ಥಳಗಳಲ್ಲಿ ಅಸಹ್ಯಕರ, ಫನ್ನಿ ಡಾನ್ಸ್ ಮಾಡಿ ತೊಂದ್ರೆ ಕೊಡ್ತಿದ್ದೆ. ನಮ್ಮ ಹುಬ್ಬಳ್ಳಿ ಟೌನ್ ಪೊಲೀಸರು ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರು. ಇನ್ಮುಂದೆ ನಾನು ಈ ರೀತಿ ನೃತ್ಯ ಮಾಡಲ್ಲ. ನೀವೂ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನು ಹುಬ್ಬಳ್ಳಿ ನಗರ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನೀವು ಮಾಡುವ ಮನೋರಂಜನೆಗಳು ಸಾರ್ವಜನಿಕರಿಗೆ ಕಿರಿಕಿರಿ ತೊಂದರೆ ಉಂಟು ಮಾಡದಿರಲಿ ಎಂದು ಕಿವಿಮಾತು ಹೇಳಿದ್ದಾರೆ.
ಇದು ಕೇವಲ ಹುಬ್ಬಳ್ಳಿಯ ಮಾರುಕಟ್ಟೆಯೊಂದರ ಸಮಸ್ಯೆಯಲ್ಲ. ಬಸ್ಸುಗಳಲ್ಲೂ ಈ ಬಗ್ಗೆ ಸೂಚನಾಫಲಕ ಹಾಕಿದರೂ ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಬಸ್ ಕಂಡಕ್ಟರ್ ಕೂಡ ಜೋರಾಗಿ ರೀಲ್ಸ್ ನೋಡುತ್ತಾ ಕೂತಿರುವುದುಂಟು. ಗರಿಗರಿ ದಿರಿಸು ಧರಿಸಿ ಸುಶಿಕ್ಷಿತರಂತೆ, ಸಭ್ಯರಂತೆ ಕಾಣುವವರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ರೀಲ್ಸ್ ನೋಡುತ್ತಾ ಮೈ ಮರೆತಿರುತ್ತಾರೆ. ಯಾವ ಸಂದರ್ಭದಲ್ಲಿ, ಯಾವ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು, ಅದರಂತೆ ವರ್ತಿಸುವುದು ನಾಗರಿಕತೆಯ ಮೊದಲ ಪಾಠ. ಅದನ್ನು ಎಲ್ಲರೂ ಕಲಿಯಬೇಕಿದೆ.