
ಹುಬ್ಬಳ್ಳಿ: ಸುಪ್ರಸಿದ್ಧ ವಿಜಯಾ ಕರದಂಟು ಮತ್ತು ಸ್ವೀಟ್ಸ್ ಮಾರ್ಟ್ ಜೂನ್ 6 ರಂದು ನಗರದ ಮೂರು ಸಾವಿರ ಮಠದ ರಸ್ತೆಯಲ್ಲಿ ಉದ್ಘಾಟನೆಯಾಗಲಿದೆ ಎಂದು ಮಳಿಗೆಯ ಮಾಲೀಕರಾದ ಸಂತೋಷ್ ಐಹೊಳ್ಳಿ ಹೇಳಿದರು.

j3tvkannada
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೀನಗಡದಲ್ಲಿ 1907ರಲ್ಲಿ ದಿ. ಸಾವಳಿಗೆಪ್ಪ ರಾಚಪ್ಪ ಐಹೊಳ್ಳಿಯವರು ಪ್ರಥಮ ಬಾರಿಗೆ ತಯಾರಿಸಿ ಕರದಂಟನ್ನು ಜಗತ್ತಿಗೆ ಪರಿಚಯಿಸಿದರು. ನಂತರ ಅವರ ಮಗನಾದ ಬಸವರಾಜ ಸಾವಳಿಗೆಪ್ಪ ಐಹೊಳ್ಳಿಯವರು ಅಂದರೆ ನಮ್ಮ ತಂದೆಯವರು ಕರದಂಟಿನೊಂದಿಗೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರು.
ಸದ್ಯ ಮುಂಚೂಣಿಯಲ್ಲಿ ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 26 ಶಾಖೆಗಳು ಇದೀಗ ಹುಬ್ಬಳ್ಳಿ ಸೇರಿ ಒಟ್ಟು 27 ಶಾಖೆಗಳು ಇವೆ. ನಮ್ಮಲ್ಲಿ ಕರದಂಟುಗಳಲ್ಲಿ ಒಟ್ಟು 5 ಪ್ರಕಾರಗಳಿದ್ದು, ಒಟ್ಟು 20ಕ್ಕೂ ಹೆಚ್ಚು ವಿವಿಧ ಬಗೆಯ ತಿಂಡಿಗಳು ಲಭ್ಯವಿದ್ದು, ಬೇರೆ ಬೇರೆ ರೀತಿಯ ಖಾರಾ ಪದಾರ್ಥಗಳು ಸಹ ಲಭ್ಯವಿವೆ ಎಂದು ಹೇಳಿದರು.