
ಉಡುಪಿ: ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಒಂದು ವರ್ಷದ ಮಗು ಮೃತಪಟ್ಟ ಘಟನೆ ಉಡುಪಿ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ.

j3tvkannada
ಪುತ್ತೂರು ಗ್ರಾಮದ ಬಾಡಿಗೆ ಮನೆ ನಿವಾಸಿ ಅಯ್ಯಪ್ಪ ಎಂಬವರ ಹೆಣ್ಣು ಮಗು ಕಾಳಮ್ಮ(1) ಮೃತಪಟ್ಟಿದೆ. ಅಯ್ಯಪ್ಪ ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇವರ ಪತ್ನಿ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು ಎನ್ನಲಾಗಿದೆ.
ವಾಪಸ್ ಮನೆಗೆ ಬಂದು ನೋಡಿದಾಗ ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಮಗು ಮೃತಪಟ್ಟಿರುವುದು ಕಂಡು ಬಂದಿದೆ. ಮಗು ಜೋಳಿಗೆಯಿಂದ ಕೆಳಗಿಳಿಯಲು ಹೋಗಿ ಅಥವಾ ನಿದ್ರಾ ಸ್ಥಿತಿಯಲ್ಲಿ ಜೋಳಿಗೆಯಿಂದ ಬಿದ್ದು ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಪೋಷಕರ ಬೇಜವಾಬ್ದಾರಿಯಿಂದ ಮಗು ಜೀವ ಕಳೆದುಕೊಂಡಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.