

J3tvkannada.in
ದಾವಣಗೆರೆ: ಮುಂಬೈ ಹೊರತುಪಡಿಸಿ, ಬೆಣ್ಣೆನಗರಿ ದಾವಣಗೆರೆಯಲ್ಲೇ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುವುದು. ನಿಗದಿತ ದಿನಾಂಕದಂತೆ ಮಾರ್ಚ್ 14 ರಂದೇ, ಅದರಲ್ಲೂ ವಿಶೇಷವಾಗಿ, ರಾಂ ಅಂಡ್ ಕೋ ಸರ್ಕಲ್ ನ ಗೆಳೆಯರ ಬಳಗದಿಂದ ಮಾರ್ಚ್ 14ರಂದು ಹೋಳಿ ಹಬ್ಬ ಆಚರಣೆ ನಡೆಸಲಾಗುವುದು. ಈ ವರ್ಷ ರಾಂ ಅಂಡ್ ಕೋ ವೃತ್ತದಲ್ಲಿ ಕಳೆದ ವರ್ಷದಂತೆ ಹೋಳಿ ಆಚರಣೆ ಮಾಡಲಾಗುದಿಲ್ಲ, ಎಂಬ ಗಾಳಿ ಸುದ್ದಿ ಹರಡಿತ್ತು. ಈ ರೀತಿಯ ಗಾಳಿ ಸುದ್ದಿಗೆ ಯಾರೂ ಕಿವಿಗೊಡಬೇಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಂ ಅಂಡ್ ಕೋ ಸರ್ಕಲ್ನಲ್ಲಿಯೇ ಹೋಳಿ ಹಬ್ಬನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರರೆಡ್ಡಿ ಅವರು ಹೇಳಿದರು.