

j3tvkannada
ದಾವಣಗೆರೆ: ಇತ್ತೀಚೆಗೆ ನಗರಗಳಲ್ಲಿ ರೌಡಿಶೀಟರ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕ್ರಿಮಿನಲ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತವೆ. ಅನ್ಯಾಯ ಅನಾಚಾರಗಳೂ ಹೆಚ್ಚಾಗುತ್ತಲೇ ಇವೆ. ಎಷ್ಟೇ ಪೊಲೀಸ್ ಕಣ್ಗಾವಲುಗಳಿದ್ದರೂ ಕ್ರಿಮಿನಲ್ಗಳು ಚಾಲಾಕಿಗಳಾಗಿ ತಮ್ಮ ಕೆಲಸಗಳನ್ನು ತಾವು ಮಾಡುತ್ತಲೇ ಇರುತ್ತಾರೆ. ಬಳಿಕ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ.
ಇದೀಗ ದಾವಣಗೆರೆ ನಗರದಲ್ಲಿರುವ 46 ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂ ಬೆಳಗ್ಗೆಯೇ ನಗರದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕುಖ್ಯಾತ ರೌಡಿಯೆನಿಸಿ ಕೊಂಡಿರುವ ಗಾರೆ ಮಂಜನ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ಶರಣಬಸವೇಶ್ವರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರವಿನಾಯ್ಕ್ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಯಿತು ಎಂದು ಮಾಹಿತಿ ನೀಡಿದ್ದಾರೆ. ಗಾರೆ ಮಂಜನ ವಿರುದ್ಧ ಕೊಲೆ ದರೋಡೆ, ಜೀವ ಬೆದರಿಕೆ ಸೇರಿದಂತೆ ಒಟ್ಟು 12 ಕೇಸ್ಗಳಿವೆ ಎಂದು ತಿಳಿಸಿದ್ದಾರೆ.