
ಬೆಂಗಳೂರು: ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 12.81 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಹಣ ಕಳೆದುಕೊಂಡ ರಮ್ಯಾ (43) ಎಂಬುವವರು ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

j3tvkannada
ಆನ್ ಲೈನ್ ಮೂಲಕ ಹೋಟೆಲ್ ಗಳ ಬಗ್ಗೆ ರಿವ್ಯೂ ಬರೆದರೆ ಹಣ ನೀಡುತ್ತೇವೆಂದು ಹೇಳಿ ಬೆಂಗಳೂರಿನ ಮಹಿಳೆಯನ್ನು ಒಂದು ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದ ಮತ್ತೊಬ್ಬ ಮಹಿಳೆ, ಆಕೆಗೆ 12 ಲಕ್ಷ ರೂ. ಮೋಸ ಮಾಡಿರುವ ಘಟನೆ ನಡೆದಿದೆ. ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 12 ಲಕ್ಷ ರೂ. ಕಳೆದುಕೊಂಡ ರಮ್ಯಾ ಇವರು ಖಾಸಗಿ ಕಂಪನಿಯ ಉದ್ಯೋಗಿ. ದೂರಿನ ಅನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ರಿವ್ಯೂ ಮಾಡುತ್ತಿದ್ದಾಗಲೇ ಹೂಡಿಕೆಗೆ ಆಮಿಷವೊಡ್ಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ಕೆಲ ದಿನಗಳ ಹಿಂದೆ ಅಪರಿಚಿತೆ ಪ್ರಿಯಾ ಹೆಸರಿನ ಮಹಿಳೆಯೊಬ್ಬರು ವ್ಯಾಟ್ಸಾಪ್ನಲ್ಲಿ ರಮ್ಯಾ ಅವರಿಗೆ ಸಂದೇಶ ಕಳುಹಿಸಿ, ಮನೆಯಲ್ಲಿಯೇ ಕುಳಿತು ರೆಸ್ಟೋರೆಂಟ್ಗಳಿಗೆ ರಿವ್ಯೂ ನೀಡಿ ಹಣ ಗಳಿಸಬಹುದೆಂದು ತಿಳಿಸಿದ್ದಳು. ಇದನ್ನು ನಂಬಿದ ರಮ್ಯಾ, ಆ ಕೆಲಸ ಮಾಡಲು ಆಸಕ್ತಿ ತೋರಿಸಿ, ಪ್ರಿಯಾ ಸೂಚಿಸಿದ್ದ ಟೆಲಿಗ್ರಾಂ ಗ್ರೂಪ್ಗೆ ಸೇರಿದ್ದರು.
ನಂತರ ಟಾಸ್ಕ್ಗಳ ಹೆಸರಲ್ಲಿ ರಮ್ಯಾ ಅವರಿಂದಲೇ ಹಣ ಹೂಡಿಕೆ ಮಾಡಿಸಲು ಪ್ರಿಯಾ ಯತ್ನಿಸಿದ್ದಾಳೆ. ಹೂಡಿಕೆ ಮಾಡಿದರೆ ಅತ್ಯಧಿಕ ಲಾಭ ಸಿಗುವುದೆಂದು ನಂಬಿಸಿದ್ದಾಳೆ. ಅದನ್ನು ನಂಬಿದ ರಮ್ಯಾ, ಪ್ರಿಯಾ ನೀಡಿದ್ದ ನಾನಾ ಬ್ಯಾಂಕ್ ಖಾತೆಗಳಿಗೆ 12.81 ಲಕ್ಷ ರೂ. ವರ್ಗಾಯಿಸಿದ್ದಾರೆ. ಪುನಃ ಹಣ ವಾಪಸ್ ಪಡೆಯಲು ಮುಂದಾದಾಗ 32 ಲಕ್ಷ ರೂ. ವರ್ಗಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಎಚ್ಚೆತ್ತ ರಮ್ಯಾ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಹೂಡಿಕೆ ಹೆಸರಲ್ಲಿ ವಂಚನೆ:-
ಆನ್ ಲೈನ್ ವಂಚನೆಗಳು ನಾನಾ ರೀತಿ ನಡೆಯುತ್ತವೆ. ಕರ್ನಾಟಕದಲ್ಲಿ ಹೊಸದೊಂದು ಜಾಲ ಹುಟ್ಟಿಕೊಂಡಿದೆ. ಆ ಜಾಲದಲ್ಲಿರುವ ಕಿರಾತಕರು, ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ವಾಟ್ಸಾಪ್ ಗುಂಪಿಗೆ ಸೇರಿಸಿ, ಫ್ರಾಡ್ ಕಂಪನಿಯೊಂದರಲ್ಲಿ ರಿಜಿಸ್ಟರ್ ಆಗುವಂತೆ ಹೇಳಿ, ಹೂಡಿಕೆ ಮಾಡಲು ಹೇಳಿದ್ದಾರೆ. ಅವರ ಮಾತಿಗೆ ಮರುಳಾದ ಉದ್ಯಮಿಯು ಹೂಡಿಕೆ ಆರಂಭಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.