ಬೆಂಗಳೂರು: ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಏಳು ವರ್ಷಗಳಿಂದ ಜೈಲಿನಲ್ಲಿರುವ ಕೈದಿಯೊಬ್ಬರು ತಮ್ಮ ಮಗಳ ಮದುವೆ ನಿಶ್ಚಯ ಕಾರ್ಯಕ್ಕೆ ಹಾಜರಾಗಲು ಹೈಕೋರ್ಟ್, 60 ದಿನಗಳ ಪೆರೋಲ್ ಮಂಜೂರು ಮಾಡಿದೆ.

j3tvkannada
ಮಗಳ ಮದುವೆ ನಿಶ್ಚಯ ಕಾರ್ಯ ನಡೆಸಬೇಕಿದ್ದು, ನನ್ನ ಪತಿ ಫರೀದ್ ಅಲಿಯಾಸ್ ಫಾಹೀದ್ಗೆ 90 ದಿನಗಳ ಪೆರೋಲ್ ಮಂಜೂರು ಮಾಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಫಾಹಿದ್ ಪತ್ನಿ ಅಫ್ಘಾನ (42) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.