
ಕೋಲಾರ: ತಾಲ್ಲೂಕಿನಾದ್ಯಂತ ಬಿರುಗಾಳಿ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಕೊಂಚ ಮುದ ನೀಡಿತು.

j3tvkannada
ಸಂಜೆ ವೇಳೆಗೆ ಶುರುವಾದ ಮಳೆಯ ಜೊತೆಗೆ ಬೀಸಿದ ಬಿರುಗಾಳಿಯಿಂದಾಗಿ ಹಲವಾರು ಕಡೆ ಮರಗಳು ನೆಲಕ್ಕೆ ಉರುಳಿವೆ.
ಬೆಮಲ್ ನಗರದಲ್ಲಿ ಕೆಲ ಮರಗಳು ನೆಲ ಕಚ್ಚಿವೆ. ಕ್ಯಾಸಂಬಳ್ಳಿ ಮತ್ತು ಕೆಜಿಎಫ್ ಮಾರ್ಗದಲ್ಲಿ ಅಲ್ಲಲ್ಲಿ ಬೀದಿ ಬದಿಯ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು.
ನಗರದಲ್ಲಿ ಕೂಡ ಸುಮಾರು ಒಂದು ಗಂಟೆ ಮಳೆ ಬಿದ್ದಿತು. ಬಿರುಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗಿದೆ ಎಂಬ ವರದಿಗಳು ಬಂದಿವೆ.