
ತುಮಕೂರು:ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊರಟಗೆರೆ ಶೇ 64.79ರಷ್ಟು ಫಲಿತಾಂಶ ಪಡೆದು, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

j3tvkannada
ಕಳೆದ ವರ್ಷ ಶೇ 62ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಶೇ 2ರಷ್ಟು ಚೇತರಿಕೆಯಾಗಿದೆ. ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಆದಿಲ್ ಲಾಲ್ ಸಾಬ್ ರಾಮ್ದುರ್ಗ 625ಕ್ಕೆ 621 (ಶೇ 99.36) ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರವೀಂದ್ರಭಾರತಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎಂ.ಎನ್.ಸೃಜನ್ 618 (ಶೇ 98.88) ಹಾಗೂ ಪಿ. ಸುಹಾಸ್ 618 (ಶೇ 98.88) ದ್ವಿತೀಯ ಸ್ಥಾನ, ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಎ.ವೇಣು 617 (ಶೇ 97.72) ಹಾಗೂ ರವೀಂದ್ರ ಭಾರತಿ ಪ್ರೌಢಶಾಲೆಯ ಜಿ.ಎಚ್. ಅಮೂಲ್ಯ 617 (ಶೇ 97.72) ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಬಿ.ಇ.ಒ ಸಿ.ವಿ.ನಟರಾಜು ಮಾಹಿತಿ ನೀಡಿದರು.