
ಬೆಂಗಳೂರು: ಭಾನುವಾರದಂದು ಮುಂಜಾನೆ ಆಗಸದಲ್ಲಿ ಸೂರ್ಯ ಉದಯಿಸುವ ಮುನ್ನವೇ ನಗರದ ಕಬ್ಬನ್ ರಸ್ತೆಯಲ್ಲಿ ಜಮಾಯಿಸಿದ್ದ ಸಹಸ್ರಾರು ಮಂದಿಯ ಮುಖದಲ್ಲಿ ಉತ್ಸಾಹ ಉಕ್ಕಿ ಹರಿಯುತ್ತಿತ್ತು. ಟಿ.ಸಿ.ಎಸ್ ವಿಶ್ವ 10 ಓಟಕ್ಕೆ ಬಣ್ಣ ಬಣ್ಣದದಿರಿಸು ತೊಟ್ಟು ಬಂದಿದ್ದ ಅವರು ಸಂಭ್ರಮದಲ್ಲಿ ತೇಲಾಡುತ್ತಿದ್ದರು.

j3tvkannada.in
ಒಂದೆಡೆ ವಾತಾವರಣ ಬಿಸಿಯೇರುತ್ತಿದ್ದರೆ ಮತ್ತೊಂದೆಡೆ ಡಿ.ಜೆ ಸಂಗೀತ ಕಾವೇರಿಸಿತ್ತು. ಅಥೀಟ್ಗಳೊಂದಿಗೆ ಚಿಣ್ಣರು, ವಿದ್ಯಾರ್ಥಿಗಳು, ಯುವಕ-ಯುವತಿಯರು, ವೃತ್ತಿ ನಿರತರು ರಸ್ತೆಯುದ್ದಕ್ಕೂ ಸಂಭ್ರಮಿಸುತ್ತಾ ಹೆಜ್ಜೆ ಹಾಕಿದರು. ಹಿರಿಯ ನಾಗರಿಕರು, ಅಂಗವಿಕಲರೂ ತಾವೇನು ಕಮ್ಮಿಯಿಲ್ಲ ಎನ್ನುವಂತೆ ಓಟದಲ್ಲಿ ಪಾಲ್ಗೊಂಡರು. ಮತ್ತೆ ಕೆಲವರು ವಿವಿಧ ವೇಷ ಭೂಷಣದೊಂದಿಗೆ ಬಂದು ಓಟಕ್ಕೆ ವಿಶೇಷ ಮೆರುಗು ನೀಡಿದರು.
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನಡೆದ ಟಿ.ಸಿ.ಎಸ್ ವರ್ಲ್ಡ್ 10ಕೆ ಬೆಂಗಳೂರಿನ ಸ್ಪರ್ಧೆಯಲ್ಲಿ 28,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶ್ರೀ ಕಂಠೀರವ ಕ್ರೀಡಾಂಗಣದಿಂದ ಹೊಸ ಮಾರ್ಗದಲ್ಲಿ ನಡೆದ ಈ ಓಟವು, ಬೆಳಗಿನ ಜಾವ 3 ಗಂಟೆಯಿಂದಲೇ ಆರಂಭವಾಗಿತ್ತು.