
ಕೊಪ್ಪಳ: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಮೃತರಿಗೆ ಶ್ರದ್ದಾಂಜಲಿ ಹಾಗೂ ಮೌನ ಪ್ರತಿಭಟನೆ ನಡೆಸಿದರು. ಪಟ್ಟಣದ ವಿವಿಧ ಬೀದಿಗಳಲ್ಲಿ ಮೇಣದ ಬತ್ತಿಯ ದೀಪವನ್ನು ಹಿಡಿದು ವಿವಿಧ ವೃತ್ತದಲ್ಲಿ ಮೆರವಣಿಗೆ ನಡೆಸಿದರು.

j3tvkannada
ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಬಳಿ ಸೇರಿದ ಪ್ರತಿಭಟನಕಾರರು ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಉಗ್ರರನ್ನು ಬಂಧಿಸಿ ಕಾನೂನು ರಿತ್ಯಕ್ರಮ ಕೈಗೊಳ್ಳಬೇಕು, ಹಾಗೆಯೇ ಪ್ರಚೋದನೆ ನೀಡುವ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಅತ್ಯಂತ ಹೇಯ ಕೃತ್ಯಕ್ಕೆ ಮುಂದಾದ ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ ಎಂದರು. ಬಿಜೆಪಿ ಮಾಜಿ ತಾಲ್ಲೂಕಿನ ಅಧ್ಯಕ್ಷ ಶಿವನಗೌಡ ಬನ್ನಪ್ಪಗೌಡ, ಪ.ಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ, ಪ.ಪಂ ಸದಸ್ಯ ಅಮರೇಶ ಹುಬ್ಬಳ್ಳಿ ಸೇರಿದಂತೆ ಮತ್ತಿತರರು ಮಾತನಾಡಿದರು. ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಪ.ಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಕಳಕಪ್ಪ ತಳವಾರ, ಮುಖಂಡರಾದ ದಾನನಗೌಡ ತೊಂಡಿಹಾಳ, ಗೌತಮ ಜೋಷಿ, ಕುಮಾರ ಗೌಡ, ಶ್ರೀಕಾಂತ ಬುಡ್ಡನಗೌಡ, ಅಂದಪ್ಪ ನರೇಗಲ್ ಸೇರಿ ಅನೇಕರು ಇದ್ದರು.