
ಶಿವಮೊಗ್ಗ: ಕಾಶ್ಮೀರದ ಪಹಲ್ಟಾಮ್ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ಪಾರ್ಥಿವ ಶರೀರ ಶಿವಮೊಗ್ಗದ ವಿಜಯ ನಗರ ಬಡಾವಣೆಯ ಮನೆ ತಲುಪುತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

j3tvkannada
ಪಾರ್ಥಿವ ಶರೀರ ಶಿವಮೊಗ್ಗದ ಎಂ.ಆರ್.ಎಸ್.ವೃತ್ತಕ್ಕೆ ಬರುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡರು. ‘ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಹಾಕಿ‘ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಸಿಬಿಯ ಮುಂಭಾಗ ಉಗ್ರರ ಪ್ರತಿಕೃತಿ ನೇತಾಕಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ಬಿ.ಎಚ್.ರಸ್ತೆಯ ಮೂಲಕ ಸಾಗಿದ ಆಂಬುಲೆನ್ಸ್ ಮೂಲಕ ಸಾಗಿ ಬೆಕ್ಕಿನಕಲ್ಮಠ, ಮೀನಾಕ್ಷಿ ಭವನ, ಅಮಿರ್ ಅಹ್ಮದ್ ವೃತ್ತ ಮೂಲಕ ಮುಖ್ಯ ಬಸ್ ನಿಲ್ದಾಣದಿಂದ ಸಾಗರ ರಸ್ತೆಯ ಸರ್ಕಿಟ್ ಹೌಸ್, ಆಯನೂರು ಗೇಟ್ ಮೂಲಕ ವಿಜಯ ನಗರ ಬಡಾವಣೆಯ ನೇತಾಜಿ ವೃತ್ತ ಸಮೀಪದ ಮನೆಗೆ ಪಾರ್ಥಿವ ಶರೀರ ತಲುಪಿತು.
ದಾರಿ ಉದ್ದಕ್ಕೂ ಸಾವಿರಾರು ಜನರು ಸೇರಿದ್ದರು. ಮಂಜುನಾಥ ರಾವ್ ನಿಧನಕ್ಕೆ ಕಂಬನಿ ಮಿಡಿದರು. ನಗರದಾದ್ಯಂತ ಅಂಗಡಿ-ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಮೃತ ಮಂಜುನಾಥ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.