
ಬೆಳಗಾವಿ: ಎಸ್.ಎಸ್.ಎಲ್.ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಪ್ರತಿಬಾರಿಯು ಉತ್ತರ ಪತ್ರಿಕೆಗಳಲ್ಲಿ ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ಬೇಡಿಕೆ ಇಡೋದು ಸಹಜ. ಈ ಬಾರಿಯೂ ಬೆಳಗಾವಿಯ ಒಬ್ಬ ವಿದ್ಯಾರ್ಥಿ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾನೆ. ನಾನು ಎಸ್.ಎಸ್.ಎಲ್.ಸಿ ಪಾಸ್ ಮಾಡಿದರಷ್ಟೇ ನನ್ನ ಹುಡುಗಿ ಲವ್ ಮಾಡ್ತೀನಿ ಅಂದಾಳ ರೀ. ಅದಕ್ಕ ನೀವು ಈ 500 ರೂ.ತಗೊಂಡು ನನ್ನ ಪಾಸ್ ಮಾಡ್ರಿ ಎಂದು ಮನವಿ ಮಾಡಿದ ಉತ್ತರ ಪತ್ರಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

j3tvkannada
ನನ್ನ ಹುಡುಗಿ ನನ್ನ ಲವ್ ಮಾಡಬೇಕಾದರೆ ನೀವು ಪ್ಲೀಸ್ ನನ್ನ ಪಾಸ್ ಮಾಡಬೇಕು ಸರ್. ಸರ್ ರೀ, ಮೇಡಂ ರೀ ನಿಮ್ಮ ಕಾಲ ಬೀಳತೇನಿ, ನನ್ನ ಲವ್ ನಿಮ್ಮ ಕೈಯಾಗ ಐತಿ ರೀ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಎಂದು ನನ್ನ ಪ್ರೇಯಸಿ ಹೇಳಿದ್ದಾಳೆ. ಈ 500 ರೂ. ತಗೊಂಡು ನೀವ ಚಹಾ ಕುಡಿದು ಪಾಸ್ ಮಾಡರಿ ಎಂದು ವಿದ್ಯಾರ್ಥಿ ಬರೆದಿರುವುದು ಪತ್ತೆಯಾಗಿದೆ.
ಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರವಣಿಗೆ ಪತ್ತೆಯಾಗಿದೆ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ಉಲ್ಲೇಖಿಸಲಾಗಿತ್ತು. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 2025 ಮಾರ್ಚ್ 21ರಿಂದ ಏಪ್ರಿಲ್ 4, 2025 ರವರೆಗೆ ಪರೀಕ್ಷೆಯನ್ನು ನಡೆದಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 8.93 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಣೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.