
ರಾಯಚೂರು: ಪೆಟ್ರೋಲ್, ಡೀಸೆಲ್, ಇಂಧನ ಹಾಗೂ ಎಲ್ಪಿಜಿ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

j3tvkannada
ತಲೆ ಮೇಲೆ ಗ್ಯಾಸ್ ಹೊತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಣದುಬ್ಬರ ನಿರುದ್ಯೋಗದಿಂದ ಯುವಕರು ಹಾಗೂ ಸಾರ್ವಜನಿಕರ ಮೇಲೆ ಪರಿಣಾಮ ಬಿರುತ್ತಿದೆ. ರೈತರು ದಿನಗೂಲಿ ಕಾರ್ಮಿಕರು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಬಾರಿ ತೀವ್ರತೆ ಬೀರಿದೆ ಎಂದು ದೂರಿದರು. ನಂತರ ಗ್ರೇಡ್2 ತಹಶೀಲ್ದಾರ ಭೀಮರಾಯ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.