
ರಾಮನಗರ: ಚನ್ನಪಟ್ಟಣದ ಕನಕ ನಗರದ ನಿವಾಸಿಯಾಗಿರುವ ಬೆಂಗಳೂರಿನ ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಎಚ್.ಎಂ. ಕುಮಾರ್ ಅವರು ರಾಜ್ಯ ಸರ್ಕಾರದ 2024ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್ 2ರಂದು ನಡೆಯಲಿರುವ ಪೊಲೀಸ್ ಧ್ವಜ ದಿನಾಚರಣೆಯಂದು ಚಿನ್ನದ ಪದಕ ಪ್ರದಾನ ಸಮಾರಂಭ ನಡೆಯಲಿದೆ.

J3tvkannada
ಮಲ್ಲಯ್ಯ ಮತ್ತು ಹುಚ್ಚಮ್ಮ ದಂಪತಿಗಳ ಪುತ್ರರಾದ ಕುಮಾರ್ ಅವರು 1996ರಲ್ಲಿ ಪೊಲೀಸ್ ಇಲಾಖೆ ಸೇರಿದರು. ತಮ್ಮ ಸೇವಾವಧಿಯಲ್ಲಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಕುಮಾರ್ ಅವರು ಪ್ರಶಂಶನೀಯವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.