
ಬರಿಗಾಲಿನಲ್ಲಿ ನಡೆಯುವುದು ಉತ್ತಮವೇ? ಅಥವಾ ಶೂ ಧರಿಕೊಂಡು ನಡೆಯುವುದು ಉತ್ತಮವೇ? ಯಾವುದು ಉತ್ತಮ ಎಂಬ ಪ್ರಶ್ನೆಗಳು ಮೂಡಿರಬಹುದು. ಬರಿಗಾಲಿನಲ್ಲಿ ನಡೆಯುವುದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ಆದರೆ ಶೂಗಳು ರಕ್ಷಣೆ ನೀಡುತ್ತವೆ. ಆದರೆ ಯಾವುದು ಉತ್ತಮ..? ಈ ಬಗ್ಗೆ ಇಲ್ಲಿ ಮಾಹಿತಿ ನೀಡಿಲಾಗಿದೆ.

ಬರಿಬರಿಗಾಲಿನಲ್ಲಿ ನಡೆಯುವುದು (walk barefoot) ಒಳ್ಳೆಯದೇ? ಎಂಬುದನ್ನು ಕೂಡ ಅರಿತುಕೊಳ್ಳಬೇಕು. ಬರಿಗಾಲಿನಲ್ಲಿ ನಡೆಯುವುದು ಉತ್ತಮವೇ? ಅಥವಾ ಪಾದರಕ್ಷೆಗಳನ್ನು ಧರಿಸುವುದು ಅಗತ್ಯವೇ? ಪ್ರಶ್ನೆ ಮೂಡಿರದೇ ಇರಬಹುದು. ಆದರೆ ಈ ಬಗ್ಗೆ ತಜ್ಞರು ಕೆಲವೊಂದು ಸಲಹೆಯನ್ನು ನೀಡಿದ್ದಾರೆ. ಅನೇಕರಿಗೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಇದೆ. ಇದು ಉತ್ತಮವೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕೆಲವರಿಗೆ ಬರಿಗಾಲಿನಲ್ಲಿ ನಡೆಯುವುದು ಆರಾಮದಾಯಕವೆನಿಸುತ್ತದೆ. ಇನ್ನು ಕೆಲವರು ಶೂ ಧರಿಸುವುದು ಅಗತ್ಯ ಎಂದು ಭಾವಿಸುತ್ತಾರೆ. ಈ ವಿಷಯದಲ್ಲಿ ಒಂದೇ ಒಂದು ಸರಿಯಾದ ಉತ್ತರವಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಬರಿಗಾಲಿನಲ್ಲಿ ನಡೆಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬರಿಗಾಲಿನಲ್ಲಿ ನಡೆಯುವಾಗ ಪಾದಗಳ ಸ್ನಾಯುಗಳು ಸ್ವಾಭಾವಿಕವಾಗಿ ಚಲಿಸುತ್ತವೆ. ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಮ್ಮ ಪಾದಗಳಲ್ಲಿರುವ ನರಗಳು ಮೆದುಳಿಗೆ ಪ್ರಮುಖ ಮಾಹಿತಿಯನ್ನು ಕಳುಹಿಸುತ್ತವೆ. ಬರಿಗಾಲಿನಲ್ಲಿ ನಡೆಯುವುದರಿಂದ ಈ ನರಗಳು ಸಕ್ರಿಯಗೊಳ್ಳುತ್ತವೆ ಮತ್ತು ಸಮತೋಲನ ಸುಧಾರಿಸುತ್ತದೆ. ನಡೆಯುವಾಗ ಸೊಂಟ ಮತ್ತು ಮೊಣಕಾಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬರಿಗಾಲಿನಲ್ಲಿ ನಡೆಯುವುದು ಒಳ್ಳೆಯದಾದರೂ, ಕೆಲವು ಸಮಸ್ಯೆಗಳು ಉಂಟಾಗಬಹುದು. ಗಟ್ಟಿಯಾದ ಮೇಲ್ಮೈಗಳಲ್ಲಿ ಬಿಸಿಯಾದ, ಚೂಪಾದ ವಸ್ತುಗಳ ಮೇಲೆ ನಡೆಯುವುದರಿಂದ ಗಾಯಗಳು ಉಂಟಾಗಬಹುದು. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲ ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳ ಸೋಂಕು ಉಂಟಾಗುತ್ತದೆ. ದೇಹವು ಅದಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಮೊದಲಿಗೆ ನೋವು ಅಥವಾ ಅಸ್ವಸ್ಥತೆ ಉಂಟಾಗಬಹುದು.