
ಮೈಸೂರು:‘‘ಮೈಸೂರು ನಗರದ ಸಿಗ್ನಲ್ ಜಂಕ್ಷನ್ಗಳಲ್ಲಿ ಎರಡು ಪಾಳಿಗಳಲ್ಲಿ 104 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಪೊಲೀಸ್ ಸಿಬ್ಬಂದಿ ನಿರ್ವಹಿಸಬೇಕಾದ ಕೆಲಸವನ್ನು ಸಿಗ್ನಲ್ ಲೈಟ್ಗಳೇ ಮಾಡುತ್ತಿರುವುದರಿಂದ ಪೊಲೀಸರು ಒಂದೆಡೆ ಸುಮ್ಮನೆ ನಿಲ್ಲುತ್ತಾರೆ ಅಥವಾ ಕೂರುತ್ತಾರೆ. ಸಿಸಿ ಟಿವಿ ಕ್ಯಾಮೆರಾ ಇದ್ದರೂ ಪೊಲೀಸರ ಭಯವಿಲ್ಲದ್ದರಿಂದ ನಿತ್ಯ ಸಾವಿರಾರು ವಾಹನ ಸವಾರರು ಸಿಗ್ನಲ್ ಜಂಕ್ಷನ್ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿಕೊಂಡು ಹೋಗುತ್ತಿರುವುದು ಹೆಚ್ಚಾಗಿದೆ’’. ಆ ಮೂಲಕ ಪೊಲೀಸರ ಕರ್ತವ್ಯದ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆಯನ್ನು ಪೊಲೀಸ್ ಇಲಾಖೆ ರೂಪಿಸಿದೆ. ಮೈಸೂರು ನಗರದ 52 ಜಂಕ್ಷನ್ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳೊಂದಿಗೆ ಎಐ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ನಿಗಾ ಇರಿಸಿರುವ ಪೊಲೀಸ್ ಇಲಾಖೆಯು, ಈಗ ಸಿಗ್ನಲ್ ಜಂಕ್ಷನ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಚಿತ್ರಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಕಳುಹಿಸುವಂತೆ ಸೂಚನೆ ನೀಡಿದೆ.

“ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ಪತ್ತೆ ಹಚ್ಚಿ, ಅವರ ಫೋಟೊಗಳನ್ನು ಮೊಬೈಲ್ ಮೂಲಕ ತೆಗೆಯಲು ಸೂಚನೆ ನೀಡಲಾಗಿದೆ. ಕರ್ತವ್ಯದ ಅವಧಿಯಲ್ಲಿ ಕನಿಷ್ಠ 25 ಸಂಚಾರ ನಿಯಮ ಉಲ್ಲಂಘನೆಯ ಚಿತ್ರಗಳನ್ನು ಜಿಪಿಎಸ್ ಲೋಕೇಷನ್ನೊಂದಿಗೆ ಸಮಯ ಮತ್ತು ದಿನದೊಂದಿಗೆ ಸೆರೆ ಹಿಡಿದು ಆಯಾ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ,’’ ಎನ್ನುತ್ತಾರೆ ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಎಂ.ಶಿವಶಂಕರ್. ಸಿಗ್ನಲ್ ಲೈಟ್ ಮತ್ತು ವೃತ್ತಗಳಲ್ಲಿಪೊಲೀಸರು ಕರ್ತವ್ಯದಲ್ಲಿದ್ದಾರೆ ಎಂದರೆ ಸಾಕು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಲಿದ್ದು, ಈ ನಿಟ್ಟಿನಲ್ಲಿಪೊಲೀಸ್ ಸಿಬ್ಬಂದಿ ಒಂದೆಡೆ ನಿಲ್ಲುವುದು ಅಥವಾ ಕೂರುವುದಕ್ಕಿಂತ ನಿಯಮ ಉಲ್ಲಂಘನೆ ಪತ್ತೆ ಕಾರ್ಯದಲ್ಲಿ ತೊಡಗಿದ್ದರೆ ವಾಹನ ಸವಾರರು ಜಾಗೃತಿಯಿಂದ ವಾಹನ ಚಲಾವಣೆ ಮಾಡುತ್ತಾರೆ ಎಂಬುದು ಪೊಲೀಸ್ ಅಕಾರಿಗಳ ಮಾತು. ಮೈಸೂರು ನಗರದ ಸಿಗ್ನಲ್ ಲೈಟ್ಗಳಲ್ಲಿಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘಿಘಿಸಿದ ವಾಹನ ಸವಾರರ ಫೋಟೋಗಳನ್ನು ತೆಗೆದು ಠಾಣೆಗಳಿಗೆ ಕಳುಹಿಸಲಾಗುತ್ತಿದ್ದು, ಠಾಣೆಯಿಂದ ಆಟೋಮೇಷನ್ ಸೆಂಟರ್ಗೆ ರವಾನೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ದಂಡ ವಿಸುವ ಕಾರ್ಯ ನಡೆಸಲಾಗುತ್ತಿದೆ. ಸಿಗ್ನಲ್ ಲೈಟ್ ಜಂಕ್ಷನ್ಗಳಲ್ಲಿ ಪೊಲೀಸರಿದ್ದರೂ ಅವರು ಏನೂ ಮಾಡುವುದಿಲ್ಲಎಂಬ ಧೈರ್ಯದಿಂದ ಸಾಕಷ್ಟು ವಾಹನ ಸವಾರರು, ಅದರಲ್ಲಿಯೂ ಯುವಕರು ಸಿಗ್ನಲ್ ಜಂಪ್ ಮಾಡಿಕೊಂಡು ಸಂಚರಿಸುವುದು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿರುವ ಪೊಲೀಸರು ಅವರ ಚಿತ್ರಗಳನ್ನು ತೆಗೆದರೆ ಉಳಿದವರು ಜಾಗೃತರಾಗುತ್ತಾರೆ.