
PM Kisan Yojana: ಈಗಾಗಲೇ 19 ಕಂತಿನ ಹಣ ರೈತರಿಗೆ ತಲುಪಿದೆ. 19ನೇ ಕಂತಿನ ಹಣ ಫೆಬ್ರವರಿ 24, 2025 ರಂದು 9.8 ಕೋಟಿಗೂ ಹೆಚ್ಚು ರೈತರಿಗೆ ತಲುಪಿದೆ. ಈ ಬಾರಿ ಒಟ್ಟು 22,000 ಕೋಟಿ ರೂಪಾಯಿ ಹಣವನ್ನು ಹಂಚಲಾಗಿದೆ. ಈಗ ರೈತರೆಲ್ಲರೂ 20ನೇ ಕಂತಿಗಾಗಿ ಕಾಯುತ್ತಿದ್ದಾರೆ. ನಮ್ಮ ದೇಶದ ರೈತರಿಗೆ ಸಹಾಯ ಮಾಡಲು ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ತಂದಿದೆ. ಈ ಯೋಜನೆಯಲ್ಲಿ, ರೈತರಿಗೆ ವರ್ಷಕ್ಕೆ 6,000 ರೂಪಾಯಿ ಸಹಾಯಧನ ಸಿಗುತ್ತದೆ. ಈ ಹಣವನ್ನು 2,000 ರೂಪಾಯಿಗಳಂತೆ ಮೂರು ಕಂತಿನಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈಗಾಗಲೇ 19 ಕಂತಿನ ಹಣ ರೈತರಿಗೆ ತಲುಪಿದೆ. 19ನೇ ಕಂತಿನ ಹಣ ಫೆಬ್ರವರಿ 24, 2025 ರಂದು 9.8 ಕೋಟಿಗೂ ಹೆಚ್ಚು ರೈತರಿಗೆ ತಲುಪಿದೆ. ಈ ಬಾರಿ ಒಟ್ಟು 22,000 ಕೋಟಿ ರೂಪಾಯಿ ಹಣವನ್ನು ಹಂಚಲಾಗಿದೆ. ಈಗ ರೈತರೆಲ್ಲರೂ 20ನೇ ಕಂತಿಗಾಗಿ ಕಾಯುತ್ತಿದ್ದಾರೆ.

20ನೇ ಕಂತಿನ ಹಣ ಮೇ – ಜೂನ್ ತಿಂಗಳಿನಲ್ಲಿ ಬರಬಹುದು. ಹಣ ಪಡೆಯಲು ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಅಥವಾ ನವೀಕರಿಸುವುದು ಮುಖ್ಯ. ಹಾಗಾದ್ರೆ ಮೊಬೈಲ್ ಸಂಖ್ಯೆಯನ್ನು ಹೇಗೆ ನೋಂದಾಯಿಸಿಕೊಳ್ಳುವುದು ಅಂತ ನೋಡೋಣ. ಪಿಎಂ ಕಿಸಾನ್ ವೆಬ್ಸೈಟ್ pmkisan.gov.in ಗೆ ಹೋಗಿ ‘ರೈತರ ಕಾರ್ನರ್’ ಅಂತ ಕಾಣುತ್ತೆ ಅಲ್ಲಿ ‘ಮೊಬೈಲ್ ಸಂಖ್ಯೆಯನ್ನು ನವೀಕರಿಸಿ’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ಹಾಕಿ. ಕ್ಯಾಪ್ಚಾ ಕೋಡ್ ಸರಿಯಾಗಿ ನಮೂದಿಸಿ. ನಂತರ ‘ಹುಡುಕಾಟ’ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮಾಹಿತಿ ಕಾಣಿಸುತ್ತದೆ. ‘ಸಂಪಾದಿಸು’ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ‘ಸಲ್ಲಿಸು’ ಕ್ಲಿಕ್ ಮಾಡಿ. ನಿಮ್ಮ ಮೊಬೈಲಿಗೆ ಒಂದು OTP ಬರುತ್ತೆ. ಅದನ್ನು ನಮೂದಿಸಿದರೆ ಮೊಬೈಲ್ ಸಂಖ್ಯೆ ನವೀಕರಣ ಆಗುತ್ತದೆ.

j3tvkannada
ನಿಮ್ಮ ಮಾಹಿತಿ ಸಿಗಲಿಲ್ಲ ಅಂದ್ರೆ ನಿಮ್ಮ ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ತಪ್ಪಾಗಿರಬಹುದು. ಸರಿಯಾಗಿ ನಮೂದಿಸಿ ಮತ್ತೆ ಪ್ರಯತ್ನಿಸಿ. OTP ಬರಲಿಲ್ಲ ಅಂದ್ರೆ ನಿಮ್ಮ ಮೊಬೈಲ್ ನೆಟ್ವರ್ಕ್ ಸರಿಯಾಗಿ ಇದೆಯಾ ನೋಡಿ. ಏನಾದ್ರೂ ಸಮಸ್ಯೆ ಇದ್ರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ದೂರು ನೀಡಬಹುದು. ಇಲ್ಲಾ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ. ಅಥವಾ ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261 ಅಥವಾ 011-24300606 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಈ ಬಾರಿಯೂ 20ನೇ ಕಂತಿನಲ್ಲಿ ಸುಮಾರು 22,000 ಕೋಟಿ ರೂಪಾಯಿ ಹಣ ರೈತರಿಗೆ ತಲುಪುವ ನಿರೀಕ್ಷೆ ಇದೆ. ಇ-ಕೆವೈಸಿ ಪೂರ್ಣಗೊಳಿಸದ ರೈತರು: ಪಿಎಂ-ಕಿಸಾನ್ ಯೋಜನೆಯಲ್ಲಿ ದಾಖಲಾದ ಎಲ್ಲಾ ರೈತರು ಇ-ಕೆವೈಸಿ (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಫಲರಾದ ರೈತರ ಕಂತು ಪಾವತಿಗಳನ್ನು ತಡೆಹಿಡಿಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ರೈತರು ಈ ಕಾರ್ಯವನ್ನು ಪೂರ್ಣಗೊಳಿಸಲು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಬಹುದು ಅಥವಾ pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.