
ಗದಗ: ಗದಗಿನ ನಗರ ಪೊಲೀಸ್ ಠಾಣೆಯಲ್ಲಿ ಹಾಜರಾತಿಗೆ ಸಹಿ, ಮಾಡಲು ಬಂದಿದ್ದ ಕಳ್ಳನೊಬ್ಬ, ಮಹಿಳಾ ಪೊಲೀಸ್ ,ಸಿಬ್ಬಂದಿಯೊಂದಿಗೆ ಮಾತನಾಡುತ್ತಾ, ಕ್ಷಣಾರ್ಧದದಲ್ಲೇ, ಸಿಬ್ಬಂದಿಯ, ಫೋನನ್ನೇ ಎಗರಿಸಿರುವ ಘಟಣೆ, ನಡೆದಿದೆ.

ಮಹಿಳಾ ಸಿಬ್ಬಂದಿಯು, ರಿಜಿಸ್ಟರ್ ಒಂದನ್ನು ನೋಡುವುದರಲ್ಲಿ, ಮಗ್ನರಾಗಿದ್ದಾಗ, ಕಳ್ಳ ತನ್ನ ಕೈ ಚಳಕವನ್ನು ತೋರಿಸಿದ್ದಾನೆ. ಖದೀಮನ, ಕರಾಮತ್ತು ಠಾಣೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಗದಗ್ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ.