ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ 28 ಫೆಬ್ರವರಿಯಂದು ಆಚರಿಸಲಾಗುತ್ತದೆ. ಆದರೆ ಯಾಕೆ ಫೆಬ್ರವರಿ 28 ರಂದು ಆಚರಿಸಲಾಗುತ್ತದೆ? ಎಂಬುದನ್ನ ನೋಡುವುದಾದರೆ ಸಿ ವಿ ರಾಮನ್ ಅವರ ಜನ್ಮದಿನವಾದ ನವೆಂಬರ್ 7 ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಫೆಬ್ರವರಿ 28, 1928 ರಂದು ಚಂದ್ರಶೇಖರ ವೆಂಕಟ (ಸಿವಿ) ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರವನ್ನು ಘೋಷಿಸಿದರು. ಅದಕ್ಕಾಗಿ ಅವರಿಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. 1986 ರಲ್ಲಿ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್ಸಿಎಸ್ಟಿಸಿ) ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಘೋಷಿಸಲು ಕೇಂದ್ರವನ್ನು ವಿನಂತಿಸಿತು. ಈ ದಿನವನ್ನು ಮೊದಲು ಫೆಬ್ರವರಿ 28, 1987 ರಂದು ಆಚರಿಸಲಾಯಿತು.

ಒಂದು ಸಣ್ಣ ಹಳ್ಳಿಯಿಂದ ನೊಬೆಲ್ ಪ್ರಶಸ್ತಿ ಮತ್ತು ಭಾರತ ರತ್ನ ಪ್ರಶಸ್ತಿ ಪಡೆಯುವವರೆಗಿನ ಪ್ರಯಾಣ, ವಿಜ್ಞಾನ ಕ್ಷೇತ್ರಕ್ಕೆ ಸಿ.ವಿ. ರಾಮನ್ ಅವರ ಕೊಡುಗೆ ಇಂದಿಗೂ ಸ್ಮರಣೀಯ. ಬೆಳಕಿನ ಚದುರುವಿಕೆಯಿಂದ ಎಕ್ಸ್-ಕಿರಣಗಳು ಮತ್ತು ಸಮುದ್ರದ ಬಣ್ಣಗಳವರೆಗೆ ಸಂಶೋಧನೆಯ ಮೂಲಕ, ರಾಮನ್ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾಯಕನಾಗಬೇಕೆಂಬ ಕನಸನ್ನು ಸಾಕಾರಗೊಳಿಸಲು ಮುಂದಾದರು. ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆ, ಪರಿಶ್ರಮ, ಪ್ರಯತ್ನ, ಹಾಗೂ ಕಾರ್ಯಗಳನ್ನು ಸದಾ ಸ್ಮರಣೆಯಲ್ಲಿಡಲು ಸರ್ಕಾರವು ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತದೆ.
ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದ ಘೋಷವಾಕ್ಯ ‘ವಿಕ್ಷಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು’. ಸರ್ಕಾರವು ನವದೆಹಲಿಯ ವಿಜ್ಞಾನ ಭವನದ ಪ್ಲೆನರಿ ಹಾಲ್ನಲ್ಲಿ ಈ ದಿನವನ್ನು ಆಚರಿಸಲಿದೆ. ಯುವ ಜನರು ವಿಜ್ಞಾನದ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಅದರಲ್ಲಿ ಆಸಕ್ತಿಯನ್ನು ಬೆಳೆಸಲು ಮತ್ತು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜನರಿಗೆ ವಿಜ್ಞಾನದ ಮಹತ್ವವನ್ನು ತಿಳಿಸುವುದು ಇದರ ಗುರಿಯಾಗಿದೆ. ಇಂದಿನ ಯುವಕರು ವಿಜ್ಞಾನದ ಮಹತ್ವದ ಬಗ್ಗೆ ತಿಳಿಯುವುದರಿಂದ ಮುಂದಿನ ಪೀಳಿಗೆವರೆಗೂ ಇದು ವೈಜ್ಞಾನಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ.