
ವಿಜಯಪುರ: ರಾತ್ರಿಯಿಡೀ ಭಾರೀ ಮಳೆ ಸುರಿದ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಘಟನೆ ನಡೆದಿದೆ. ಸಂಗೀತಾ ಬಾಳಾಸಾಹೇಬ ಪಾಟೀಲ್ (30) ಮೃತ ಮಹಿಳೆ.

j3tvkannada
ಭಾನುವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವಘಡ ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದ ವೇಳೆ ಮನೆಯಿಂದ ಎದ್ದು ಹೊರ ಬಂದು ಪತಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಗೃಹಿಣಿ ಸಂಗೀತಾ ಮೇಲೆ ಮೇಲ್ಛಾವಣಿ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯರು ಮಣ್ಣಲ್ಲಿ ಮುಚ್ಚಿ ಹೋಗಿದ್ದ ಸಂಗೀತಾ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿಕೋಟ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ