
ದಾವಣಗೆರೆ:.ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಿನ್ನೆ ತಡರಾತ್ರಿ ಏಕಾಏಕಿ ಸ್ಫೋಟದ ಸದ್ದೊಂದು ಕೇಳಿ ಬಂದಿದೆ. ನಿದ್ದೆಯಲ್ಲಿದ್ದ ಜನ ಸ್ಫೋಟದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದೂ, ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಜಗಳೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಏನಿದು ಸ್ಫೋಟ? ಈ ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನೂ ನಿಗೂಢವಾಗಿದೆ. ಇನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

j3tvkannada.in
ಗಾಢ ನಿದ್ದೆಯಲ್ಲಿದ್ದ ದಾವಣಗೆರೆ ಜನರಲ್ಲಿ ಸ್ಫೋಟದ ಸದ್ದಿನಿಂದ ಆತಂಕ ಸೃಷ್ಟಿಯಾಗಿದೆ. ಜಗಳೂರು ಪಟ್ಟಣದಲ್ಲಿ 5 ದಶಕಗಳ ನಂತರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಬೃಹತ್ ಕಲ್ಲು ಬಂಡೆ ತೆರವು ಮಾಡಲು ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ಜನವಸತಿ ಪ್ರದೇಶದಲ್ಲಿ ಸ್ಪೋಟಕ ಬಳಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾ ಏಕಿ ಈ ರೀತಿ ಸ್ಫೋಟವಾದಾಗ ಜನರಲ್ಲಿ ತೀವ್ರ ಆತಂಕ ಮೂಡಿದೆ. ಮಕ್ಕಳು ಮಹಿಳೆಯರು ಭಯಭೀತರಾಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.