
ಬಾಗಲಕೋಟೆ: ದಾರವಾಡ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ೪ನೇ ಅಖಿಲ ಭಾರತ ಸಾಹಿತ್ಯ ಪರಿಷದ್ ಸಮ್ಮೇಳನದಲ್ಲಿ ರಾಜ್ಯ ಇತಿಹಾಸ ಅಕಾಡೆಮಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರ ಬಿ.ಆರ್.ಕೃಷ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸತತ ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ನಡೆದವು, ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕವಿ, ಸಾಮಾಜಿ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ ಮಾಡಲಾಯಿತು.

ಧಾರವಾಡ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ೪ನೇ ಅಖಿಲ ಭಾರತ ಸಾಹಿತ್ಯ ಪರಿಷದ್ ಸಮ್ಮೇಳನದಲ್ಲಿ ರಾಜ್ಯ ಇತಿಹಾಸ ಅಕಾಡೆಮಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರ ಬಿ.ಆರ್.ಕೃಷ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಇತಿಹಾಸಕಾರ, ಸಂಶೋಧಕ, ಹಿರಿಯ ಪತ್ರಕರ್ತ,ತಾಲ್ಲೂಕು ಸಾಹಿತ್ಯ ಅಕಾಡೆಮಿ ಅದ್ಯಕ್ಷ ಬಿ.ಆರ್.ಕೃಷ್ಣ ಅವರು “ದಕ್ಷಿಣ ಭಾರತದ ಕಲ್ಲಗೋರಿಗಳ ಇತಿಹಾಸ” ಪುಸ್ತಕ ಬಿಡುಗಡೆ ಮಾಡಿದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ ಆದ್ದರಿಂದ 4ನೇ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಅಂಗವಾಗಿ ಅವರನ್ನು ಸನ್ಮಾನಿಸಲಾಯಿತು.