
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದವರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.

j3tvkannada
ಬೌರಿಂಗ್ನಲ್ಲಿ 6 ಹಾಗೂ ವಿಕ್ಟೋರಿಯಾದಲ್ಲಿ 5 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಮೃತಪಟ್ಟವರ ಸಾವಿಗೆ ಕಾರಣ ಬಯಲಾಗಿದೆ. ಎಲ್ಲರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿರುವುದು ವರದಿಯಲ್ಲಿ ದೃಢಪಟ್ಟಿದೆ. ಕೆಲವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೆ ಇನ್ನೂ ಕೆಲವರು ಮೃತರ ಎದೆಯ ಭಾಗದಲ್ಲಿ ಹೆಚ್ಚು ಒತ್ತಡ ಬಿದ್ದು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಉಸಿರುಗಟ್ಟುವಿಕೆ ಆರಂಭ ಆಗಿ 15ರಿಂದ 18 ನಿಮಿಷದಲ್ಲಿ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕಿ ಕೂಡ ಉಸಿರುಗಟ್ಟುವಿಕೆಯಿಂದ ಕೊನೆಯುಸಿರೆಳೆದಿದ್ದಾಳೆ. ಸಾವಿಗೆ ಉಸಿರುಗಟ್ಟುವಿಕೆ ಬಿಟ್ಟರೆ ಬೇರೆ ಯಾವುದೇ ರೀತಿಯ ಅಂಶ ಕಂಡು ಬಂದಿಲ್ಲ.
ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ 9 ಜನರಿಗೆ ಚಿಕಿತ್ಸೆ ಮುಂದುವರಿದಿದೆ. 9 ಜನರ ಪೈಕಿ ಇಬ್ಬರಿಗೆ ಕಾಲು ಮೂಳೆ ಮುರಿದಿದೆ. ಒಬ್ಬರಿಗೆ ತಲೆಗೆ ಗಾಯ ಆಗಿದೆ. ಉಳಿದವರಿಗೆ ಸಣ್ಣಪುಟ್ಟ ಸಮಸ್ಯೆಗಳಾಗಿವೆ. 15 ಜನರಲ್ಲಿ ಆರು ಜನ ಡಿಸ್ಚಾರ್ಜ್ ಆಗಿದ್ದು, 9 ಜನರಿಗೆ ಚಿಕಿತ್ಸೆ ಮುಂದುವರಿದಿದೆ.