
ಗುಡಿಬಂಡೆ: ಇಲ್ಲಿನ ಪಟ್ಟಣಕ್ಕೆ ದಿನ ನಿತ್ಯ ಸಾವಿರಾರು ಜನರು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಒಂದು ಒಳ್ಳೆಯ ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಾರೆ. ಮಹಿಳೆಯರ ಪರಿಸ್ಥಿತಿಯಂತೂ ಹೇಳತೀರದು. ಪಟ್ಟಣದ ಪಂಚಾಯತಿಯ ಪಕ್ಕದಲ್ಲಿ ಇರುವ ಒಂದು ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ನೀರಿಲ್ಲದೆ, ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತಿದೆ.

ಸರಕಾರೀ ಕಛೇರಿಗಳಾದಂತಹ ತಾಲೂಕು ಆಪೀಸ್, ಆಸ್ಪತ್ರೆಗಳು, ಮುಂತಾದ ಆಫೀಸ್ಗಳಿಗೆ ನಿತ್ಯವೂ ಸಾರ್ಜನಿಕರು ಬರಲೇಬೇಕು. ಹೀಗಿರುವಾಗ ಪಟ್ಟಣದಲ್ಲಿ ಸ್ವಚ್ಚವಾದ ಸಾರ್ವಜನಿಕ ಶೌಚಾಲಯವಿಲ್ಲದೆ ಪರದಾಡಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣದ ಪಂಚಾಯತಿಗೆ ದೂರು ನೀಡಿದ್ದಾರೆ, ದೂರನ್ನು ಸ್ವೀಕರಿಸಿದ ಅಧಿಕಾರಿಗಳ ಶಬಶಿರಿನ್ ಇದು ನನ್ನ ಗಮನಕ್ಕೆ ಬಂದಿರಲಿಲ್ಲ ಮುಂದೆ ಶೌಚಾಲಯದ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.ಳ