
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂರೇ ದಿನಕ್ಕೆ ಕೆ.ಆರ್.ಎಸ್ ಡ್ಯಾಂನಲ್ಲಿ 9 ಅಡಿ ನೀರು ಏರಿಕೆ ಕಂಡಿದೆ. ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಡ್ಯಾಂಗೆ ಮತ್ತೆ ಜೀವ ಕಳೆ ಬಂದಿದೆ. ಡ್ಯಾಂಗೆ 22 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಹರಿದು ಬರುತ್ತಿದೆ. 3 ದಿನದ ಹಿಂದೆ 89 ಅಡಿಗೆ ಡ್ಯಾಂ ನೀರಿನ ಮಟ್ಟ ಇಳಿದಿತ್ತು.

j3tvkannada
ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನಲೆ ಇಂದು ಡ್ಯಾಂನಲ್ಲಿ 98 ಅಡಿ ನೀರು ಏರಿಕೆ ಕಂಡಿದೆ. ನಾಳೆ ವೇಳೆಗೆ ಡ್ಯಾಂ ನೀರಿನ ಮಟ್ಟ 100 ಅಡಿ ತಲುಪುವ ಸಾಧ್ಯತೆಗಳಿವೆ. ಇದೀಗ ಡ್ಯಾಂನಲ್ಲಿ 22,788 ಕ್ಯೂಸೆಕ್ ನೀರಿನ ಒಳಹರಿವಿದ್ದು, ಡ್ಯಾಂನಿಂದ 630 ಕ್ಯೂಸೆಕ್ ನೀರಿನ ಹೊರ ಹರಿವಿದೆ. ಈ ಕೆಆರ್ಎಸ್ ಡ್ಯಾಂನಲ್ಲಿ 49.452 ಟಿಎಂಸಿ ನೀರಿನ ಸಾಮರ್ಥ್ಯವಿದ್ದು, ಸದ್ಯ ಡ್ಯಾಂನಲ್ಲಿ 21.282 ಟಿಎಂಸಿ ನೀರು ಸಂಗ್ರಹವಾಗಿದೆ.