
ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೈತರು ಮತ್ತು ಮಧ್ಯಮ ವರ್ಗದವರಿಗೆ ಸಹಾಯಕವಾಗುವ ಸೌರಶಕ್ತಿ ಆಧಾರಿತ ವಾಹನಗಳನ್ನು (Solar Powered Vehicle) ಆವಿಷ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು ಕಡಿಮೆ ಮೈಲೇಜ್ ವಾಹನಗಳಿಂದ ರೈತರಿಗೆ ಆರ್ಥಿಕ ಒತ್ತಡ ಹೆಚ್ಚಾಗಿದೆ.

j3tvkannada
ಈ ಸಮಸ್ಯೆಗೆ ಪರಿಹಾರವಾಗಿ ಈ ವಿದ್ಯಾರ್ಥಿಗಳು ಸೌರಶಕ್ತಿ ಮತ್ತು ಬ್ಯಾಟರಿಯಿಂದ ಚಲಿಸುವ ಬೈಸಿಕಲ್, ಬೈಕ್, ಔಷಧ ಸಿಂಪಡಣೆ ವಾಹನ ಮತ್ತು ಕಾರನ್ನು ರೂಪಿಸಿದ್ದಾರೆ. ಈ ವಾಹನಗಳು ಡೀಸೆಲ್ ಅಥವಾ ಪೆಟ್ರೋಲ್ಗೆ ಬದಲಾಗಿ ಸೌರ ಫಲಕಗಳು ಮತ್ತು ಬ್ಯಾಟರಿಗಳನ್ನು ಬಳಸುತ್ತವೆ. ಬಿಸಿಲಿನ ವೇಳೆ ಸೌರ ಫಲಕಗಳಿಂದ ಚಾರ್ಜ್ ಮಾಡಬಹುದು, ಮಳೆಗಾಲದಲ್ಲಿ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತವೆ.