
ಮೈಸೂರು: ಮೈಸೂರು – ಅರಸೀಕೆರೆ ರೈಲ್ವೆ ಕಾಮಗಾರಿ ಹಿನ್ನೆಲೆ ಮೈಸೂರು ಮಾರ್ಗದ ರೈಲುಗಳ ಸಂಚಾರ ವ್ಯತ್ಯಯವಾಗಿದೆ. ಪ್ರಮುಖವಾಗಿ 1 ಎಕ್ಸ್ಪ್ರೆಸ್ ರೈಲು ರದ್ದಾಗಿದ್ದು, ಮತ್ತೊಂದು ರೈಲು ಭಾಗಶಃ ರದ್ದಾಗಿದೆ. ಇನ್ನು 3 ರೈಲುಗಳು ತಡವಾಗಿ ಸಂಚಾರ ನಡೆಸಲಿವೆ.

j3tvkannada
ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಸಾಗರಕಟ್ಟೆ ಮತ್ತು ಕೃಷ್ಣರಾಜನಗರ ಯಾರ್ಡ್ಗಳ ನಡುವೆ ನಡೆಯುವ ಟ್ರ್ಯಾಕ್ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ರೈಲು ಸೇವೆಗಳನ್ನು ಮಾರ್ಗಮಧ್ಯೆ ನಿಯಂತ್ರಿಸಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಮೂರು ರೈಲು ತಡವಾಗಿ ಸಂಚಾರ:-
1.ರೈಲು ಸಂಖ್ಯೆ 16222 ಮೈಸೂರು – ತಾಳಗುಪ್ಪ ಎಕ್ಸ್ಪ್ರೆಸ್ ಮೇ 29 ಮತ್ತು 30, 2025 ರಂದು ಪ್ರಯಾಣ ಆರಂಭಿಸುವ ರೈಲು ಮಾರ್ಗ ಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಇದೇ ರೈಲು, ಮೇ 31 ಮತ್ತು ಜೂನ್ 1 ರಂದು 25 ನಿಮಿಷಗಳು ತಡವಾಗಿ ಸಂಚರಿಸಲಿವೆ.
2.ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ ಮೇ 29 ಮತ್ತು 30, 2025 ರಂದು ಪ್ರಯಾಣ ಆರಂಭಿಸುವ ರೈಲು ಮಾರ್ಗ ಮಧ್ಯೆ 20 ನಿಮಿಷಗಳ ಕಾಲ ತಡವಾಗಲಿದೆ. ಮೇ 31 ಮತ್ತು ಜೂನ್ 1 ರಂದು 45 ನಿಮಿಷ ತಡವಾಗಲಿದೆ.
3.ರೈಲು ಸಂಖ್ಯೆ 56208 ಮೈಸೂರು – ಚಿಕ್ಕಮಗಳೂರು ಎಕ್ಸ್ಪ್ರೆಸ್ ಮೇ 31 ಮತ್ತು ಜೂನ್ 1, 2025 ರಂದು ಪ್ರಯಾಣ ಆರಂಭಿಸುವ ರೈಲು ಮೈಸೂರು ನಿಲ್ದಾಣದಿಂದ 30 ನಿಮಿಷಗಳ ತಡವಾಗಿದೆ ಪ್ರಾರಂಭವಾಗುತ್ತದೆ.
ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಜೂನ್ 1 2025 ರಂದು ರದ್ದುಗೊಳಿಸಲಾಗಿದೆ.
ಯಾವೆಲ್ಲಾ ರೈಲು ರದ್ದು:-
ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳಿಸಲಾಗುತ್ತದೆ. ಜೂನ್ 1, 2025 ರಂದು ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್ವರೆಗೆ ಮಾತ್ರ ಓಡಿಸಲಾಗುತ್ತದೆ ಮತ್ತು ಅರಸೀಕೆರೆಯಲ್ಲಿ ನಿಗದಿತ ವೇಳೆಯಲ್ಲಿ ಹೊರಡುತ್ತದೆ.