
ಮೈಸೂರು: ವರುಣಾ ಗ್ರಾಮದ ಬಳಿಯ ಹೋಟೆಲ್ ಮುಂಭಾಗ ಭಾನುವಾರ ತಡರಾತ್ರಿ ರೌಡಿಶೀಟರ್ನನ್ನು ಮಚ್ಚಿನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

j3tvkannada
ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ (33) ಕೊಲೆಯಾದ ವ್ಯಕ್ತಿ. ಹಳೆ ವೈಷಮ್ಯದಿಂದ ಕೊಲೆ ನಡೆದಿದೆ. ಮೃತದೇಹವನ್ನು ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.