
ಕಲಬುರಗಿ: ಯುಪಿಎಸ್ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ ಪಡೆದ ಕಮಲಾಪುರ ತಾಲ್ಲೂಕಿನ ಡೋರ ಜಂಬಗಾ ಗ್ರಾಮದ ಮೋಹನ ಸಂಗಣ್ಣಗೌಡ ಪಾಟೀಲ ಅವರನ್ನು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.

j3tvkannada
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಪ್ಪಟ ಗ್ರಾಮೀಣ ಪ್ರತಿಭೆ ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಯಲ್ಲಿ ಓದಿ ರಾಷ್ಟ್ರಮಟ್ಟದ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುವ ಮೋಹನ ಪಾಟೀಲ ಅವರ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು. ಸಾಧಕ ಮೋಹನ ಎಸ್. ಪಾಟೀಲ ಮಾತನಾಡಿ, ನನಗೆ ಯುಪಿಎಸ್ಸಿ ಪರೀಕ್ಷೆ ಕನಸಾಗಿತ್ತು. ಸತತ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಗುರಿ ಮುಟ್ಟಲು ಸಾಧ್ಯವಾಯಿತು ಎಂದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಪದಾಧಿಕಾರಿಗಳಾದ ಧರ್ಮರಾಜ ಜವಳಿ, ನಂದಿನಿ ಸನಬಾಳ ಮಾತನಾಡಿದರು. ಹಣಮಂತಪ್ರಭು, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ರವಿಕುಮಾರ ಶಹಾಪುರಕರ್, ಶಿವಲೀಲಾ ಕಲಗುರ್ಕಿ, ಸವಿತಾ ನಾಸಿ, ರಮೇಶ ಡಿ.ಬಡಿಗೇರ, ಗಣೇಶ ಚಿನ್ನಾಕಾರ, ದಿನೇಶ ಮದಕರಿ, ಮಹೇಶ ಚಿಂತನಪಳ್ಳಿ, ಮಧುಸೂಧನ ಚಿಂತನಪಳ್ಳಿ, ಪ್ರಭವ ಪಟ್ಟಣಕರ್, ಮಲ್ಲಿನಾಥ ಸಂಗಶೆಟ್ಟಿ, ಚಂದ್ರಕಾಂತ ಸೂರನ್ ಸೇರಿ ಅನೇಕರು ಇದ್ದರು.