
ಹಾಸನ: ಹೊಳೆನರಸೀಪುರ ತಾಲ್ಲೂಕಿನ ರಾಜಮುಡಿ ಅಕ್ಕಿ, ಸೌತೆಕಾಯಿ, ಬೆಣ್ಣೆ ಅತ್ಯಂತ ರುಚಿ ಎನ್ನುವ ಮಾತಿದೆ. ಇತ್ತೀಚೆಗೆ ಈ ಮಣ್ಣಿನಲ್ಲಿ ಬೆಳೆಯುವ ಹಲಸಿನ ಹಣ್ಣು ಕೂಡ ಬಲುರುಚಿ ಎನಿಸಿಕೊಳ್ಳುತ್ತಿದೆ.

j3tvkannada
ರುಚಿಯಾದ ಹಲಸಿನ ಹಣ್ಣನ್ನು ಕೊಳ್ಳಲು ಬೆಳಗಿನ ಜಾವ 6 ರಿಂದ 8 ಗಂಟೆಗು ಮುನ್ನ ಇಲ್ಲಿನ ಗಾಂಧಿ ವೃತ್ತಕ್ಕೆ ಬಂದರೆ ಎಷ್ಟು ಬೇಕಾದರೂ ಹಲಸಿನ ಹಣ್ಣು ಖರೀದಿಸಬಹುದು. ತಾಲ್ಲೂಕಿನಲ್ಲಿ ಕೆಲವರು ರೈತರಿಂದ ಹಲಸಿನಹಣ್ಣು ಖರೀದಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡಿ ಜೀವನ ರೂಪಿಸಿಕೊಂಡವರು ಅನೇಕರಿದ್ದಾರೆ. ತಾಲ್ಲೂಕಿನಲ್ಲಿ ಡಿಸೆಂಬರ್ನಿಂದ ಮಾರಾಟಕ್ಕೆ ಬರುವ ಹಲಸಿನ ಹಣ್ಣು ಆಗಸ್ಟ್ವರೆಗೆ ಸಿಗುತ್ತದೆ. ನಿತ್ಯ ಬೆಳಿಗ್ಗೆ 1 ರಿಂದ 3 ಟನ್ನಷ್ಟು ಹಲಸಿನ ಹಣ್ಣು ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಹೋಗುತ್ತದೆ. ಕೆಲವೊಮ್ಮೆ ಒಂದು ಚಿಕ್ಕಗಾತ್ರದ ಹಲಸಿನ ಹಣ್ಣನ್ನು ತಿನ್ನುವವರು ₹50ಗೆ ಖರೀದಿಸಿದರೆ, ಮಾರಾಟಗಾರರು ಅದೇ ಗಾತ್ರದ ಹಲಸಿನ ಹಣ್ಣನ್ನು ₹100ಕ್ಕೆ ಖರೀದಿಸುತ್ತಾರೆ. ಏಕೆ ಹೆಚ್ಚು ಬೆಲೆಕೊಟ್ಟು ಖರೀದಿಸಿದಿರಿ ಎಂದರೆ ಅದು ಒಳ್ಳೆಯ ಮರದ ಹಣ್ಣು, ಹಲಸಿನ ತೋಳೆ ಕೂಡ ದಪ್ಪ ಇರುತ್ತದೆ ಎನ್ನುವರು.
ತಿನ್ನುವವರಿಗಿಂತ ಮಾರಾಟ ಮಾಡುವವರೇ ಒಳ್ಳೆಯ ಹಣ್ಣುಗಳನ್ನು ಖರೀದಿಸಿ ಸ್ಥಳದಲ್ಲೇ ₹20-₹30 ಹೆಚ್ಚು ಪಡೆದು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ ಅಲಗೌಡನಹಳ್ಳಿ ರಾಮಸ್ವಾಮಿ. ಸ್ಥಳೀಯರಲ್ಲಿ ಕೆಲವರು ರೈತರಿಂದ ಕಡಿಮೆ ಬೆಲೆಗೆ ಹಲಸಿನ ಹಣ್ಣುಗಳನ್ನು ಖರೀದಿಸಿ ಹೊರ ಊರಿನ ಖರೀದಿದಾರರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಹಲಸಿನ ಹಣ್ಣಿನ ಕಾಲದಲ್ಲಿ ಮಾರಾಟಗಾರರು, ಒಳ್ಳೆಯ ಹಣ್ಣು ಬಿಡುವ ಮರಗಳಿಗೆ ಐದಾರು ತಿಂಗಳು ಮೊದಲೇ ಮುಂಗಡ ಪಾವತಿಸಿ, ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ.