
ಹಾಸನ: ಜಿಲ್ಲೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ಬ್ಯಾಗ್ನಿಂದ ₹5.70 ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.

j3tvkannada
ವಿದ್ಯುತ್ ನಗರದ ಸುಬ್ಬಮ್ಮ ಅವರು ಮೈಸೂರಿನಿಂದ ಹಾಸನಕ್ಕೆ ಬರುವ ಬಸ್ಸು ಹತ್ತಿದ್ದು. ಮಧ್ಯಾಹ್ನ ಸುಮಾರು 1.30 ಗಂಟೆಗೆ ಹಾಸನದ ಹೊಸ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಅಲ್ಲಿಂದ ಮನೆಗೆ ಹೊಗಲು ದಾಸರಕೊಪ್ಪಲು ಹೋಗುವ ನಗರ ಸಾರಿಗೆ ಬಸ್ ಹತ್ತಿದ್ದರು. ಬಸ್ನಲ್ಲಿ ನೋಡಿದಾಗ, ಬ್ಯಾಗ್ ತೆರೆದಿದ್ದು, ಒಟ್ಟು ₹4.90 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮತ್ತೊಂದು ಪ್ರಕರಣದಲ್ಲಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ನಲ್ಲಿದ್ದ ₹50 ಸಾವಿರ ನಗದು ಹಾಗೂ ₹28 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರಿನ ಶೈಲಜಾ ಅವರು ಹಾಸನದಿಂದ ಬೆಂಗಳೂರಿಗೆ ತಡೆರಹಿತ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಹತ್ತಿ ನೋಡಿಕೊಳ್ಳುವಷ್ಟರಲ್ಲಿ ಅಭರಣ, ನಗದು ಕಳವಾಗಿದ್ದವು. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.