

j3tvkannada
ಗದಗ : ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಯೋಗಿ ವೇಮನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಕಾಲೇಜಿನ ಒಟ್ಟು 125 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ರಾಹುಲ್ ಸಂಶಿ (ಶೇ.88) ಪ್ರಥಮ ಸ್ಥಾನ, ಆಯಿಷಾ ಬೇಗಂ(ಶೇ.87), ದ್ವಿತೀಯ, ರೇಖಾ ಕರೆಕೆಂಚಪ್ಪನವರ (ಶೇ86.33) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರೋಷನ್ ತೋಟದ (ಶೇ.91) ಪ್ರಥಮ, ಭರತ ಶೀರನಹಳ್ಳಿ(ಶೇ.89) ದ್ವೀತಿಯ, ಮೇಘಾ ಪಾಟೀಲ(ಶೇ.86) ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಂದಿನಿ ಶೀರನಹಳ್ಳಿ(ಶೇ.91) ಪ್ರಥಮ, ವಿಜಯಲಕ್ಷ್ಮೀ ಚಕ್ರಸಾಲಿ(ಶೇ.90) ದ್ವಿತೀಯ, ವಿನಾಯಕ ಹುಬ್ಬಳ್ಳಿ(ಶೇ.87) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.