
ಚಿತ್ರದುರ್ಗ : ರೈಲು ನಿಲ್ದಾಣದ ಉಪ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸದುರ್ಗ- ಶಿವನಿ ರೈಲು ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

j3tvkannada
ಅಂದಾಜು 25-30 ವರ್ಷ ಅಪರಿಚಿತ ಪುರುಷ ಶವ ದೊರೆತಿದೆ. ಮೃತರ ವಿಳಾಸ ಹಾಗೂ ವಾರಸುದಾರರ ಬಗ್ಗೆ ತಿಳಿದು ಬಂದಿಲ್ಲ. ಮೃತರು ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ‘ಅವ್ವಾ…’ಪ್ರೀತಮ್‘ ಹಾಗೂ ಹೂವಿನ ಚಿತ್ರವಿರುವ ಹಚ್ಚೆ ಹಾಗೂ ಎಡಗೈನ ತೋಳಿನಲ್ಲಿ ‘SN’ ಎಂದು ಮತ್ತು ಎದೆಯ ಎಡ ಭಾಗದಲ್ಲಿ ‘M’ ಎಂಬ ಹಚ್ಚೆ ಗುರುತು ಹೊಂದಿರುತ್ತಾರೆ.
ಮೃತರ ಮೈ ಮೇಲೆ ನೀಲಿ ಬಣ್ಣದ ಟೀಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಹಾಕಿದ್ದಾರೆ. ಮೃತರ ಸಂಬಂಧಿಕರು ಇದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ಸಂಪರ್ಕಿಸಲು ವಿನಂತಿಸಿದ್ದಾರೆ. ಮೊ: 94808 02123 ಅಥವಾ 08192 259643