
ಕೊಪ್ಪಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

j3tvkannada
10 ದಿನಗಳು ಜೂಟ್ ಬ್ಯಾಗ್ ತಯಾರಿಕೆ, 30 ದಿನಗಳ ಮೊಬೈಲ್ ದುರಸ್ತಿ, ಸರ್ವಿಸ್ ತರಬೇತಿ, 30 ದಿನಗಳ ಮೋಟಾರ್ ರಿವೈಂಡಿಂಗ್, ಪಂಪ್ಸೆಟ್ ದುರಸ್ತಿ ತರಬೇತಿಗಾಗಿ ಏ.21ರಂದು ಸಂದರ್ಶನ ನಡೆಯಲಿದ್ದು, 22ರಿಂದ ತರಬೇತಿ ಪ್ರಾರಂಭವಾಗಲಿವೆ. ಅರ್ಜಿದಾರರು 18ರಿಂದ 45 ವರ್ಷದ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಉತ್ತೀರರ್ಣರಾಗಿರಬೇಕು. ಜಿಲ್ಲೆಯ ಗ್ರಾಮೀಣ ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಇನ್ನಷ್ಟು ಮಾಹಿತಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ , ಸಂಪರ್ಕಿಸಬಹುದು. , 08539231038, 9483618178, 7259073827. ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುತ್ತದ ಎಂದು ಪ್ರಕಟಣೆ ತಿಳಿಸಿದೆ.