
ಬೀದರ್: ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಜೋರು ಮಳೆ ಬೇಸಿಗೆಯನ್ನು ಮರೆಸಿತು.

j3tvkannada
37ರಿಂದ 38 ಡಿಗ್ರಿ ಸೆಲ್ಸಿಯಸ್ ಬಿಸಿಲಿನಿಂದ ಜನ ಬಸವಳಿದಿದ್ದರು. ಮಳೆಗೆ ಇಳೆ ತಂಪಾಗಿದ್ದು, ಜನ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಎರಡು ಗಂಟೆಗೂ ಅಧಿಕ ಸಮಯ ಸುರಿದ ಮಳೆಗೆ ವಾತಾವರಣ ಸಂಪೂರ್ಣ ತಂಪಾಯಿತು. ಮಧ್ಯಾಹ್ನ 3ರ ಸುಮಾರಿಗೆ ಬಿರುಗಾಳಿ, ಗುಡುಗಿನೊಂದಿಗೆ ಆರಂಭಗೊಂಡ ಮಳೆ ಸಂಜೆ 4.30ರ ವರೆಗೆ ಬಿರುಸಿನಿಂದ ಸುರಿಯಿತು. ಆನಂತರ ಜಿಟಿಜಿಟಿಯಾಗಿ ಮುಂದುವರಿಯಿತು. ಸಂಜೆ 5.30ರ ನಂತರವೂ ಮಳೆ ಸುರಿಯಿತು. ಬಿರುಸಿನ ಮಳೆಗೆ ನಗರದ ಮನ್ನಳ್ಳಿ ರಸ್ತೆಯ ಹಾರೂರಗೇರಿ, ವಿದ್ಯಾನಗರ, ಮೈಲೂರ್ ಕ್ರಾಸ್ನಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ವಾಹನ ಸವಾರರು ತೀವ್ರ ಪರದಾಟ ನಡೆಸಿ ರಸ್ತೆ ದಾಟಿದರು.