

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನರೇಗಾ ಫಲಾನುಭವಿಗಳಿಗೆ ನರೇಗಾದಡಿ ಸೌಲಭ್ಯಗಳಿದ್ದು , ಯಾರು ವಂಚಿತರಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ಪಿ.ಎಸ್.ಕಸನಕ್ಕಿ ಹೇಳಿದರು. ಎಲ್ಲರೂ ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನರೇಗಾ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗಪಡೆದುಕೊಳ್ಳಬೇಕು. ಎಪ್ರಿಲ್ನಿಂದ ಜೂನ್ ತಿಂಗಳವರೆಗೆ ಮೂರು ತಿಂಗಳು ನಿರಂತರ ಕೆಲಸ ನೀಡುವ ಮೂಲಕ ವಲಸೆ ತಪ್ಪಿಸಬಹುದಾಗಿದ್ದು, ಯಾರು ಬೇರೆ ಊರುಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗದೆ ಇದ್ದೂರಲ್ಲೇ ದುಡಿದು ಜೀವನ ನಿರ್ವಹಣೆ ಮಾಡಿ ಎಂದು ತಿಳಿಸಿದರು. ಪ್ರಸ್ತುತ ನರೇಗಾ ಕೂಲಿ ದರ ₹ 370 ಹೆಚ್ಚಳವಾಗಿದೆ. 100 ದಿನ ದುಡಿದ ಕೂಲಿಕಾರರಿಗೆ ₹ 37 ಸಾವಿರ ಸಿಗಲಿದೆ. ನರೇಗಾ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದ್ದು, ಯಾರು ಆತಂಕ ಪಡದೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ನರೇಗಾ ಯೋಜನೆಯ ತಾಲ್ಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಶೋಕ ಕೊರವರ ಹಾಗೂ ಗ್ರಾ.ಪಂ.ಸಿಬ್ಬಂದಿ ಇದ್ದರು.