
ಮೈಸೂರು: ಗಾಯತ್ರಿಪುರಂ ನಿವಾಸಿ ದಿವ್ಯ ಮತ್ತು ಸ್ಯಾಮ್ಯುಯೆಲ್ ದಂಪತಿಯ 3 ವರ್ಷ 10 ತಿಂಗಳ ಪುತ್ರಿ ಸಲೋಮಿ ಸ್ತುತಿ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದಾಳೆ.
ಸಾಮಾನ್ಯವಾಗಿ ಮೂರು ವರ್ಷದ ಮಗು ತನ್ನ ಪೋಷಕರ ಹೆಸರನ್ನು ಸರಿಯಾಗಿ ಉಚ್ಚರಿಸಲು ತೊದಲುತ್ತದೆ. ಆದರೆ, ಮೈಸೂರಿನ ಮೂರು ವರ್ಷದ ಬಾಲಕಿ ತನ್ನ ನೆನಪಿನ ಶಕ್ತಿಯಿಂದಲೇ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ (India Book Of Records) ದಾಖಲೆ ಬರೆದಿದ್ದಾಳೆ. ಹಾಗಾದರೆ ಆ ಬಾಲಕಿ ಯಾರು?

ಗಾಯತ್ರಿಪುರಂ ನಿವಾಸಿ ದಿವ್ಯ ಮತ್ತು ಸ್ಯಾಮ್ಯುಯೆಲ್ ದಂಪತಿಯ 3 ವರ್ಷ 10 ತಿಂಗಳ ಪುತ್ರಿ ಸಲೋಮಿ ಸ್ತುತಿ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದಾಳೆ. ಸಲೋಮಿ ಸ್ತುತಿ ಇಂಗ್ಲಿಷ್ ಅಕ್ಷರಮಾಲೆಯ A ಯಿಂದ Z ವರೆಗಿನ ದೇಶಗಳ ಹೆಸರುಗಳನ್ನು, 1 ರಿಂದ 10 ರವರೆಗಿನ ಸಂಖ್ಯೆಗಳನ್ನು ಏಳು ಭಾಷೆಗಳಲ್ಲಿ ಸರಾಗವಾಗಿ ಹೇಳುತ್ತಾಳೆ. ಇದರ ಜೊತೆಗೆ ಭಾರತದ ಎಲ್ಲಾ ರಾಜ್ಯಗಳ ರಾಜಧಾನಿಗಳು, ಅಮೆರಿಕ ಸಂಯುಕ್ತ ಸಂಸ್ಥಾನದ 50 ರಾಜ್ಯಗಳ ಹೆಸರುಗಳು, ಎಲ್ಲಾ ಗ್ರಹಗಳ ಹೆಸರುಗಳು ಮತ್ತು ಏಳು ಖಂಡಗಳ ಹೆಸರುಗಳನ್ನು ತಪ್ಪಿಲ್ಲದೆ ಉಲ್ಲೇಖಿಸುತ್ತಾಳೆ.