
ದಕ್ಷಿಣ ಕನ್ನಡ: ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳವಿಗೆ ಯತ್ನಿಸಿದ ಮೂವರ ಪೈಕಿ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಸ್ಥಳೀಯರ ಸಹಕಾರದಿಂದ ಬಂಧಿಸಿದ್ದಾರೆ. ಕೇರಳ ನಿವಾಸಿಗಳಾದ ಮುರಳಿ ಮತ್ತು ಇರ್ಷಾದ್ ಬಂಧಿತರು.

j3tvkannada
ಖದೀಮರು ದೇರಳಕಟ್ಟೆ ಸಮೀಪ ರಾತ್ರಿಯವರೆಗೂ ಕಾದು ಕುಳಿತು, ಬಳಿಕ ಕಳವಿಗೆ ಯತ್ನಿಸಿದ್ದರು. ಮುಂಜಾನೆ 3 ಗಂಟೆ ವೇಳೆಗೆ ಡ್ರಿಲ್ ಮಷಿನ್ ಮೂಲಕ ಬಾಗಿಲು ಮುರಿಯಲು ಯತ್ನಿಸಿದ ಸಂದರ್ಭದಲ್ಲಿ ಸೈರೆನ್ ಮೊಳಗಿತ್ತು. ತಕ್ಷಣ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಮೀಪವೇ ಗಸ್ತಿನಲ್ಲಿದ್ದ ಕೊಣಾಜೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಮೂವರು ಆರೋಪಿಗಳು ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಸೇರಿ ಇಬ್ಬರನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಭಂದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.