
ಚಿಕ್ಕಬಳ್ಳಾಪುರ: 30 ವರ್ಷಗಳ ನಂತರ ನಗರದ ಸಂತೆ ಮಾರುಕಟ್ಟೆಯಲ್ಲಿರುವ ನಗರಸಭೆಯ ಮಳಿಗೆಗಳ ಮರು ಹರಾಜಿಗೆ ಕಾಲಕೂಡಿದೆ. ಏ.5 ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಪೌರಾಡಳಿತ ನಿಯಮಗಳ ಪ್ರಕಾರ 12 ವರ್ಷಗಳಿಗೆ ಮರು ಹರಾಜು ನಡೆಯಬೇಕು. ಆದರೆ ರಾಜಕೀಯ ಕಾರಣಗಳು ಮತ್ತು ಕೆಲವು ಸದಸ್ಯರ ಹಿತಾಸಕ್ತಿಯ ಕಾರಣಕ್ಕೆ ಮರು ಹರಾಜು ನಡೆದಿರಲಿಲ್ಲ. ಮರು ಹರಾಜಿಗೆ ನಗರಸಭೆಯು ಮುಂದಡಿ ಇಡುತ್ತಿದ್ದಂತೆ ಲಾಬಿಗಳ ಕಾರಣದಿಂದ ಮುಂದೂಡಲಾಗುತ್ತಿತ್ತು. ಇಲ್ಲವೆ ಹರಾಜಿಗೆ ಯತ್ನಿಸಿದವರನ್ನು ಮೌನವಾಗಿಸಲಾಗುತ್ತಿತ್ತು. ಈ ಹಿಂದೆ ಒಮ್ಮೆ ಮಳಿಗೆ ಹರಾಜಿಗೆ ದಿನ ನಿಗದಿಗೊಳಿಸಿ ಕೊನೆಯ ಕ್ಷಣದಲ್ಲಿ ಮುಂದೂಡಲಾಯಿತು. ಇದು ಚಿಕ್ಕಬಳ್ಳಾಪುರ ರಾಜಕೀಯ ಮತ್ತು ವ್ಯಾಪಾರಿ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.