
ಹಾವೇರಿ: ಆರ್.ಸಿ.ಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು, ಪೊಲೀಸರನ್ನು ಎತ್ತಂಗಡಿ ಮಾಡುವುದಕ್ಕಿಂತ ಪ್ರಕರಣಕ್ಕೆ ಸಚಿವರು, ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಶಿವಕುಮಾರ್ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಬುದ್ಧಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ. ಇಂತಹ ಸರ್ಕಾರ ನೋಡಿರಲಿಲ್ಲ. ಬುದ್ಧಿಗೇಡಿ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

j3tvkannada
ಆರ್.ಸಿ.ಬಿ ಮ್ಯಾಚ್ ಗೆದ್ದ ದಿನ ರಾತ್ರಿಯಿಡೀ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದಾರೆ. ಅದಕ್ಕೆ ಪೊಲೀಸರು ಬಂದೋಬಸ್ತ್ ನೀಡಿದ್ದಾರೆ. ಬೆಳಗ್ಗೆ ತರಾತುರಿಯಲ್ಲಿ ವಿಜಯೋತ್ಸವ ಹಮ್ಮಿಕೊಂಡಿದ್ದು, ಪೊಲೀಸರು ಯಾವ ರೀತಿ ಭದ್ರತೆ ನೀಡಬೇಕು. ಇವರೇನು ಒಲಿಂಪಿಕ್ ಗೆದ್ದು ಬಂದಿದ್ದಾರಾ, ಆಯೋಜಕರು ಸಹ ಬೇಜವಾಬ್ದಾರಿ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದು ಈ ಅನಾಹುತಕ್ಕೆ ಕಾರಣ. ಈ ಸರ್ಕಾರ ರಾಜ್ಯವನ್ನು ಆಡಳಿತ ಮಾಡಲು ಅರ್ಹತೆ ಇಲ್ಲ. ಇಡೀ ಕಾರ್ಯಕ್ರಮ ಗೊಂದಲಮಯವಾಗಿತ್ತು. ಅವರ ಚೇಲಾಗಳೇ ವೇದಿಕೆಯಲ್ಲಿದ್ದರು. ಪೊಲೀಸರನ್ನು ಎತ್ತಂಗಡಿ ಮಾಡುದಕ್ಕಿಂತ ಪ್ರಕರಣಕ್ಕೆ ಸಚಿವರು, ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಹೊಣೆ ಎಂದು ಆರೋಪಿಸಿದರು.
ಕ್ರೀಡಾಂಗಣದ ಹೊರಗಡೆ ಸಾವಿನ ಸುದ್ದಿ ಬಂದರೂ ಸಹ ಕ್ರೀಡಾಂಗಣದ ಒಳಗೆ ಕಾರ್ಯಕ್ರಮ ಮುಂದುವರಿಸಿದ್ದಾರೆ. ಒಂದು ಕಡೆ ವಿಜಯೋತ್ಸವ, ಇನ್ನೊಂದು ಶವಯಾತ್ರೆ ಮಾಡಿದ್ದಾರೆ. ಇದೊಂದು ಸರ್ಕಾರನಾ ರಾಜ್ಯದಲ್ಲಿ ಕೋಮು ಗಲಭೆ, ಅಪಹರಣ, ಗಲಾಟೆ, ಕೊಲೆ ಪ್ರಕರಣಗಳು ಹೆಚ್ಚಾಗಿದೆ ಎಂದು ಅವರು ದೂರಿದರು.
ವಿರೋಧ ಪಕ್ಷ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು, 11 ಜನರು ಮೃತಪಟ್ಟರು ನಾವು ಕೇಳಬಾರದಾ ಕೆ.ಎಸ್.ಸಿ.ಎ ಮೇಲೆ ಕೇಸ್ ಆಗಿದ್ದು ಸರಿ ಇದೆ. ಅದರೆ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ಸರ್ಕಾರ ವಿಫಲವಾಗಿದೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಅವರು ಹೇಳಿದರು.