
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಡಿಯೋ ಮಾಡಿದ್ದ ಮೈಸೂರು ಕೇಂದ್ರ ಕಾರಾಗೃಹದ ವೀಕ್ಷಕ ಎಚ್.ಎಸ್ ಮಧುಕುಮಾರ್ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಬೆಟ್ಟದ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಮನೆಯಲ್ಲಿ ಮಧು ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಧೀಶರ ಎದುರು ಹಾಜರುಪಡ್ಡಿಸಿ, ಡಿ.ಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಕಾರಾಗೃಹ ಇಲಾಖೆಯಲ್ಲಿಯೂ ಮಧು ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಧು ಕುಮಾರ್ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

j3tvkannada
ಸಿ.ಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಗರಂ ಆಗಿ ಅವರ ಮೇಲೆ ಕೈ ಎತ್ತಿದ್ದ ಘಟನೆಯಿಂದ ಬೇಸರ ಗೊಂಡ ಮಧು ಆ ವಿಷಯವನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದಾರೆ. ಸಿ.ಎಂಗೆ ಅವಾಚ್ಯ ಪದ ಬಳಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ಹಲ್ಲೆ, ಸಿ.ಎಂ ಸಿದ್ದರಾಮಯ್ಯ ಮೇಲಿನ ಮುಡಾ ಪ್ರಕರಣ ಸೇರಿದಂತೆ ವಿವಿಧ ವಿಷಯಗಳನ್ನು ಉಲ್ಲೇಖ ಮಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಜತೆಗೆ ವಿಡಿಯೋವನ್ನು ಸಿ.ಎಂ ಸಿದ್ದರಾಮಯ್ಯಗೆ ತಲುಪಿಸಿ ಎಂದು ಹೇಳಿದ್ದರು. ವಿಡಿಯೋ ಕೊನೆಯಲ್ಲಿ ಮಧು ಎಂಬಾತನು, ನಾನು ಮಾಡಿರುವ ಈ ವಿಡಿಯೋವನ್ನು ಸಿ.ಎಂಗೆ ಮುಟ್ಟಿಸಿ. ಇದರಿಂದ ನನ್ನ ಕೆಲಸ ಹೋದರು ಪರವಾಗಿಲ್ಲ ಎಂದು ಹೇಳಿದ್ದರು. ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಲು ಮುಂದಾದ ಸಿ.ಎಂ ಸಿದ್ದರಾಮಯ್ಯನವರ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರಿದ್ದಾರೆ.