
ಕೋಲಾರ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆಗಳಲ್ಲಿ ಗುಡುಗು -ಮಿಂಚು ಸಹಿತ ಭಾರೀ ಮಳೆಯಾಯಿತು.

j3tvkannada
ಸಂಜೆ 4 ಗಂಟೆಗೆ ಮೋಡ ಆವರಿಸಿ ಕತ್ತಲಿನ ವಾತಾವರಣ ನಿರ್ಮಾಣವಾಯಿತು. 6 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. ಗಾಳಿ ಜೊತೆ ಭಾರೀ ಗುಡುಗು ಸಿಡಿಲಿನ ಅಬ್ಬರವೂ ಇತ್ತು. ಸುಮಾರು ಅರ್ಧ ತಾಸು ಬಂದ ಮಳೆ ನಂತರ ನಿಂತು ಹೋಯಿತು.
ಈ ಮಳೆಗೆ ನಗರದ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡಿದರು. ಕೆ.ಜಿ.ಎಫ್, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕಿನ ಹಲವೆಡೆ ಮಳೆಯಾಯಿತು. ಕೆಲ ದಿನಗಳಿಂದ ಬಿಸಿಲ ಬೇಗೆಯಿಂದ ಬಳಲಿದ್ದ ಭುವಿಗೆ ಮಳೆಯ ಸಿಂಚನವಾಯಿತು. ವಾತಾವರಣವೂ ತಂಪಾಯಿತು, ಜನರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟರು.