
ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 20,000 ರೂ.ದಂಡ ವಿಧಿಸಲಾಗಿದೆ. ಫೆಬ್ರವರಿ 10, 2019 ರಂದು ನಡೆದ ಅಪರಾಧದಲ್ಲಿ ಮೂಡುಬಿದಿರೆಯ ಪಡುಮಾರ್ನಾಡು ಕೆಸರಗದ್ದೆ ನಿವಾಸಿ ಆಸಿಫ್ (43) ತಪ್ಪಿತಸ್ಥನೆಂದು ಸಾಬೀತಾಗಿದೆ.

10 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಮಾರ್ಪಾಡಿ ಜೈನ್ಪೇಟೆ ಬಳಿಯ ಪ್ರೌಢಶಾಲೆಯಲ್ಲಿ ವಿಶೇಷ ತರಗತಿಯ ನಂತರ ಆಕೆಯ ನೆರೆ ಮನೆಯ ಯುವಕನಿಗೆ ಬೈಕ್ನಲ್ಲಿ ಮನೆಗೆ ಕರೆದುಕೊಂಡು ಹೋಗಲು ಕೇಳಿಕೊಂಡಳು. ಯುವಕ ಆಕೆಯನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೊರಡುವಾಗ ಹುಡುಗಿಯ ದೂರದ, ಸಂಬಂಧಿಯಾದ ಆಸಿಫ್ ಎಂಬಾತ ಅವಳನ್ನು ತಡೆದು ಬೇರೆ ಧರ್ಮದ ವ್ಯಕ್ತಿಯ ಜೊತೆ ಏಕೆ ಹೋಗುತ್ತೀಯಾ ಎಂದು ಪ್ರಶ್ನಿಸಿದನು.
ನಂತರ ಆತ ಆಕೆಗೆ ಕಪಾಳ ಮೋಕ್ಷ ಮಾಡಿ, ಅವಮಾನಿಸಿ, ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದ ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದನು, ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು. ಘಟನೆಯ ನಂತರ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಆಗಿನ ಇನ್ಸ್ಪೆಕ್ಟರ್ ದೇಜಪ್ಪ ಆರೋಪಪಟ್ಟಿ ಸಲ್ಲಿಸಿದ್ದರು. ಕೂಲಂಕಷ ವಿಚಾರಣೆಯ ನಂತರ, ನ್ಯಾಯಾಧೀಶ ವಿಜಯ್ ದೇವರಾಜ್ ಆಸಿಫ್ ತಪ್ಪಿತಸ್ಥನೆಂದು ಘೋಷಿಸಿ ಅವನಿಗೆ ಶಿಕ್ಷೆ ವಿಧಿಸಿದರು.