
ಉಡುಪಿ:ಅಹಮದಾಬಾದ್ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಎಐ-171ನ ಸಹ ಪೈಲಟ್ ಕ್ಲೈವ್ ಕುಂದರ್(34) ಅವರ ತಂದೆ ಕ್ಲಿಫರ್ಡ್ ಕುಂದರ್ ಮೂಲತಃ ಮಲ್ಪೆಯವರಾಗಿದ್ದಾರೆ. ಕ್ಲೈವ್ ಅವರ ತಂದೆ ಕ್ಲಿಫರ್ಡ್ ಕಡಲಾಚೆಯ ರಿಗ್ಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ತಾಯಿ ಮಂಗಳೂರಿನ ರೇಖಾ ಈ ಹಿಂದೆ ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮುಂಬಯಿಯಲ್ಲಿ ನೆಲೆಸಿರುವ ಕ್ಲಿಫರ್ಡ್ ದಂಪತಿ ಮಗಳಿಗಾಗಿ ಪ್ರಸ್ತುತ ಆಸ್ಪ್ರೇಲಿಯಾದಲ್ಲಿದ್ದು, ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಮರಳಲು ನಿರ್ಧರಿಸಿದ್ದರು ಎಂದು ಕುಟುಂಬದ ದೂರದ ಸಂಬಂಧಿ ಅಮೃತ್ ಕುಂದರ್ ತಿಳಿಸಿದ್ದಾರೆ.

j3tvkannada
ಕ್ಲಿಫರ್ಡ್ ಶಾಂತ ಸ್ವಭಾವದವರು. ಕುರ್ಲಾದ ಬಾಸೆಲ್ ಮಿಷನ್ ಚರ್ಚ್ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದರು. ಫ್ಲೋರಿಡಾದಲ್ಲಿ ತಮ್ಮ ವಾಣಿಜ್ಯ ಪೈಲಟ್ ತರಬೇತಿಯನ್ನು ಪೂರ್ಣಗೊಳಿಸಿದರು. ನಂತರ ವಾಯುಯಾನದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಭಾರತಕ್ಕೆ ಮರಳಿದ್ದರು. ಕ್ಲೈವ್ ಕುಟುಂಬಕ್ಕೆ ಸಂಬಂಧಿಯಾಗಿರುವ ನಟ ವಿಕ್ರಾಂತ್ ಮಾಸ್ಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ನನ್ನ ಚಿಕ್ಕಪ್ಪ ಕ್ಲಿಫರ್ಡ್ ಕುಂದರ್ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಇನ್ನಷ್ಟು ನೋವುಂಟಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಕ್ಲೈವ್ ಕುಂದರ್ ಕುಟುಂಬ ಮೂಲತ: ಮಲ್ಪೆಯವರು. ನನ್ನ ಪತ್ನಿಯ ತಾಯಿಯ ತಾಯಿ(ಗ್ರ್ಯಾಂಡ್ ಮದರ್)ಗೆ ಹತ್ತಿರದ ಸಂಬಂಧಿ. ದುರಂತದಲ್ಲಿಅವರನ್ನು ಕಳೆದುಕೊಂಡಿದ್ದೇವೆ. ದುಃಖದಲ್ಲಿದ್ದೇವೆ ಎಂದು ಕುಂದಾಪುರದ ರಾಕೇಶ್ ಸೋನ್ಸ್ ಹೇಳಿದ್ದಾರೆ.

j3tvkannada
“12 ಫೇಲ್” ಚಿತ್ರದ ಖ್ಯಾತಿಯ ನಟ ವಿಕ್ರಾಂತ್, ದುರಂತದಲ್ಲಿ ತಮ್ಮ ಕುಟುಂಬದ ಸ್ನೇಹಿತರೊಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಸ್ಥರು ನೋವು ಭರಿಸುವ ಶಕ್ತಿ ನೀಡಲಿ. ನನ್ನ ಚಿಕ್ಕಪ್ಪ ಕ್ಲಿಫರ್ಡ್ ಕುಂದರ್ ಅವರ ಮಗ ಕ್ಲೈವ್ ಕುಂದರ್ ಈ ವಿಮಾನ ಸಹ ಪೈಲಟ್ ಆಗಿದ್ದರು. ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಅವರು ಬರೆದುಕೊಂಡಿದ್ದಾರೆ.