
ಗದಗ: ಪೊಲೀಸರಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆ ಕೋರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಜಯಸಿಂಹ ಮೊಡಕೆರ್ ಕಾಲಿಗೆ ಗುಂಡೇಟು ಬಿದ್ದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಆರೋಪಿ ಜಯಸಿಂಹ ಮೊಡಕೆರ್ನ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

j3tvkannada
ಆರೋಪಿಗಳಾದ ಜಯಸಿಂಹ ಮೊಡಕೆರ್, ಮಂಜುನಾಥ ಮೊಡಕೆರ್ ರಾಜ್ಯ ಮತ್ತು ಅಂತಾರಾಜ್ಯ ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರರು. ನಿನ್ನೆ ವಿಜಯನಗರ ಜಿಲ್ಲೆಯ ಬಳಿ ಜಯಸಿಂಹನನ್ನು ವಶಕ್ಕೆ ಪಡೆಯಲಾಗಿತ್ತು. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿರುವಾಗ ಪೊಲೀಸ್ ವಾಹನದಲ್ಲಿ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಸಿ.ಪಿ.ಐ ಮಂಜುನಾಥ ಕುಸುಗಲ್, ಆರೋಪಿ ಜಯಸಿಂಹನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಮನೆ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಈ ನಟೋರಿಯಸ್ ದರೋಡೆಕೋರರು ಭಾಗಿಯಾಗಿದ್ದರು. ಇನ್ನು ಗದಗ ಎಸ್.ಪಿ. ಬಿ.ಎಸ್ ನೇಮಗೌಡ ಆಸ್ಪತ್ರೆಗೆ ಭೇಟಿ ನೀಡಿ, ಆರೋಪಿ ಜಯಸಿಂಹ ಮೊಡಕೆರೆ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಅವರ ಆರೋಗ್ಯ ವಿಚಾರಿಸಿದ್ದಾರೆ.