

j3tvkannada
ತುಮಕೂರು: ಸುಮಾರು ವರ್ಷಗಳಿಂದ ಪೊಲೀಸ್ ದಾಖಲೆಗಳಲ್ಲಿ ಮತ್ತು ಸಮಾಜದಲ್ಲಿ ರೌಡಿಶೀಟರ್ ಆಗಿ ಉಲ್ಲೇಖಿಸಲ್ಪಟ್ಟವರಿಗೆ ನಿಮ್ಮನ್ನು ರೌಡಿಶೀಟರ್ ಉಪನಾಮದಿಂದ ಮುಕ್ತಗೊಳಿಸಲಾಗುತ್ತಿದೆ ಅಂತ ಹೇಳಿದಾಗ ಸಹಜವಾಗೇ ಖುಷಿಯಾಗುತ್ತದೆ. ತುಮಕೂರು ಎ.ಸ್ ಪಿ ಶೋಕ್ ವೆಂಕಟ್ ರೌಡಿ ಶೀಟರ್ಗಳ ಪುನರಾವಲೋಕನ ಸಭೆ ಕರೆದು ಜಿಲ್ಲೆಯ ಸುಮಾರು 91 ರೌಡಿಶೀಟರ್ ಗಳ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನವಾಬ್ ಪಾಶಾ ಹೆಸರಿನ ಹಿರಿಯ ವ್ಯಕ್ತಿಯೊಬ್ಬರು ಒಬ್ಬ ರೌಡಿಶೀಟರ್ ಆಗಿ ಕಳೆದ 18 ವರ್ಷಗಳಲ್ಲಿ ಅನುಭವಿಸಿದ ನೋವು, ಯಾತನೆ, ಅರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.