
ಮಂಡ್ಯ: ಕರ್ನಾಟಕದ ಮನೆ ಮಾತಾಗಿರುವ ನಂದಿನಿ ಹಾಲು ಈಗ ದೆಹಲಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡ್ತಿದೆ. ವಿವಿಧ ಕಂಪನಿಗಳ ಹಾಲಿನ ಜೊತೆಗೆ ಪೈಪೋಟಿ ನಡೆಸಿ, ತನ್ನ ಗುಣಮಟ್ಟದಿಂದಲೇ ಪ್ರತಿ ನಿತ್ಯ 50 ಸಾವಿರ ಲೀಟರ್ ಹಾಲು ಮಾರಾಟವಾಗ್ತಿದೆ.

j3tvkannada
ಕಳೆದ ನವಂಬರ್ ನಲ್ಲಿ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ನಮ್ಮ ಮಂಡ್ಯ ರೈತರು ಹೈನುಗಾರಿಕೆ ಮಾಡಿದ ಹಾಲು, ಅಂದರೆ ನಂದಿನಿ ಹಾಲು ಈಗ ಭಾರೀ ಸದ್ದು ಮಾಡ್ತಿದೆ. ದೆಹಲಿ ಮಾರುಕಟ್ಟೆಗೆ ಈ ಮೊದಲು ಹತ್ತು ಸಾವಿರ ಲೀಟರ್ ಹಾಲು ಪೂರೈಕೆ ಮಾಡಲಾಗ್ತಿತ್ತು. ಇದಾದ ಬಳಿಕ ಕಾರಣಾಂತರಗಳಿಂದ ಮಾರುಕಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಮಾರಾಟದಲ್ಲೂ ಕೊಂಚ ಇಳಿಕೆಯಾಗಿತ್ತು.
ಇನ್ನು ಇದಾದ ನಂತರ ಒಕ್ಕೂಟದ ನಿರ್ದೇಶಕರು ಮತ್ತು ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಶ್ರಮಿಸಿದ ಹಿನ್ನೆಲೆ ದೆಹಲಿ ಮಾರುಕಟ್ಟೆ ಸಮಸ್ಯೆ ಬಗೆಹರಿದಿದೆ. ಇದರ ಜೊತೆಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಆಗ್ತಿರೋದ್ರಿಂದ ಅಲ್ಲಿನ ಜನರು ಕೂಡ ನಂದಿನ ಹಾಲು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸದ್ಯ ಪ್ರತಿನಿತ್ಯ 50 ಸಾವಿರ ಲೀಟರ್ ಹಾಲು ದೆಹಲಿ ಮಾರುಕಟ್ಟೆಯಲ್ಲಿ ಮಾರಾಟವಾಗ್ತಿದೆ.
ಇನ್ನು ದೆಹಲಿ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟ 50 ಸಾವಿರ ಲೀಟರ್ ತಲುಪಿದ ಹಿನ್ನೆಲೆ, ಮನ್ಮುಲ್ ಆವರಣದಲ್ಲಿ ಕೇಕ್ ಕತ್ತರಿಸಿ ಸಿಬ್ಬಂದಿಗಳು ಸಂಭ್ರಮಿಸಿದ್ರು. ಸಿಬ್ಬಂದಿಗಳ ಪರಿಶ್ರಮದಿಂದ ಈ ಸಾಧನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಂದಿನಿ ಉಪ ಉತ್ಪನ್ನಗಳನ್ನ ಸಹ ದೆಹಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವಿಶ್ವಾಸವನ್ನು ಮನ್ಮುಲ್ ವ್ಯಕ್ತಪಡಿಸಿದೆ.