
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ರೈಲ್ವೇ ಪ್ರಯಾಣಿಕರ ಹೆಚ್ಚಿನ ಅನುಕೂಲತೆಗಾಗಿ ಮತ್ತು ಮೂಲಭೂತ ಸೌಕರ್ಯದ ಸುಧಾರಣೆಗಾಗಿ ನೈಋತ್ಯ ರೈಲ್ವೇ ವಲಯವು ಹುಬ್ಬಳ್ಳಿ-ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸಪ್ರೆಸ್ ರೈಲು ಸೇವೆ ಪ್ರಾರಂಭಿಸಿದೆ. ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ಕುಷ್ಟಗಿ-ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ರೈಲ್ವೇ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.

j3tvkannada
ಕುಷ್ಟಗಿ – ಹುಬ್ಬಳ್ಳಿ ರೈಲು ನಿಲ್ದಾಣದ (56 ಕಿಮೀ) ನಡುವಿನ ಪ್ಯಾಸೆಂಜರ್ ರೈಲು ಸೇವೆಯು ಗದಗ ಮತ್ತು ಕೊಪ್ಪಳ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಕೃಷಿ, ಗಣಿಗಾರಿಕೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯವನ್ನು ಸುಧಾರಿಸುತ್ತದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
ಈ ರೈಲು 2 ಎಸ್ಎಲ್ಆರ್/ಡಿ ಮತ್ತು 6 ಸಾಮಾನ್ಯ ದ್ವಿತೀಯ ದರ್ಜೆ/ಸ್ಲೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಸಂಚರಿಸಲಿದೆ. ಮಾರ್ಗ ಮಧ್ಯ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳಿ, ಕುಕನೂರು, ತಳಕಲ್, ಬನ್ನಿಕೊಪ, ಸೋಂಪುರ ರೋಡ್, ಹಳಿಗುಡಿ ಹಾಲ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ
ರೈಲು ಸಂಖ್ಯೆ 17327: ಎಸ್ಎಸ್ಎಸ್ ಹುಬ್ಬಳ್ಳಿ-ಕುಷ್ಟಗಿ ದೈನಂದಿನ ಎಕ್ಸ್ಪ್ರೆಸ್ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ರೈಲು ಕುಸುಗಲ್, ಹೆಬಸೂರ, ಶಿಶ್ತಿನಹಳ್ಳಿ, ಅಣ್ಣಿಗೇರಿ, ಹುಲಕೋಟಿ, ಗದಗ, ಕಣಗಿನಹಾಳ ರೋಡ್ ಬನ್ನಿಕೊಪ್ಪ, ತಲಕಲ್, ಕುಕನೂರು, ಸಂಗನಾಳ, ಯಲಬುರ್ಗಾ, ಹನಮಾಪೂರ ಮತ್ತು ಲಿಂಗನಬಂಡಿ ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿವೆ.
ರೈಲು ಸಂಖ್ಯೆ 17328: ಕುಷ್ಟಗಿ- ಎಸ್ಎಸ್ಎಸ್ ಹುಬ್ಬಳ್ಳಿ, ದೈನಂದಿನ ಎಕ್ಸ್ಪ್ರೆಸ್ ರೈಲು ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣ ತಲಪುತ್ತದೆ. ಲಿಂಗನಬಂಡಿ , ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಲಕಲ್, ಬನ್ನಿಕೊಪ್ಪ, ಹಳ್ಳಿಗುಡಿ ಹಾಲ್ಸ್, ಹರ್ಲಾಪುರ, ಕಣಗಿನಹಾಳ, ಶಿಶ್ತಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ಆಗಮಿಸಿ ಮತ್ತು ನಿರ್ಗಮಿಸಲಿದೆ.